ಉಜಿರೆ :(ಮಾ.4) ಉಜಿರೆ ಅನುಗ್ರಹ ಪಿ ಯು ಕಾಲೇಜಿನಲ್ಲಿ ಮಾರ್ಚ್ 03ರ ತಡ ರಾತ್ರಿ ಕಳ್ಳತನ ನಡೆದಿದೆ. ಕಾಲೇಜಿನ ಕಚೇರಿಗೆ ನುಗ್ಗಿದ ಕಳ್ಳರು, ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಹಣ ಸಿಗದ ಹಿನ್ನೆಲೆ , ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕೊನೆಗೆ ಸಿಸಿ ಕ್ಯಾಮೆರಾ ಎವಿಆರ್ , ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾರೆ.

ಇದನ್ನೂ ಓದಿ: ⭕ಕಾಸರಗೋಡು: ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ
ಸ್ಥಳಕ್ಕೆ ಶ್ವಾನದಳ ಭೇಟಿ, ಪರಿಶೀಲನೆ ..!
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ. ಬೆರಳಚ್ಚು ತಜ್ಜರು ಪರಿಶೀಲನೆ ನಡೆಸಿದ್ದಾರೆ.


ಮೂರನೇ ಬಾರಿಗೆ ಕಳ್ಳತನ.!
ಉಜಿರೆಯ ಅನುಗ್ರಹ ಕಾಲೇಜಿನಲ್ಲಿ ಮೂರನೇ ಬಾರಿ ಕಳ್ಳತನ ನಡೆದಿದೆ. ಈ ಹಿಂದೆ ಕೂಡ ಕಳ್ಳತನ ನಡೆದಿದೆ.


