Mon. Mar 10th, 2025

ಉಜಿರೆ : ಉಜಿರೆ ಶ್ರೀ ಧ.ಮಂ.ಕಾಲೇಜಿನಲ್ಲಿ “Meaning Success – A project Evaluation ” ಕಾರ್ಯಕ್ರಮ

ಉಜಿರೆ :(ಮಾ.5) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇಲ್ಲಿ “Meaning Success :A project Evaluation ” ಕಾರ್ಯಕ್ರಮ ಜರುಗಿತು. ಇದೊಂದು ಸಂಶೋಧನ ಅಧ್ಯಯನ ಕುರಿತಾದ ಮೌಲ್ಯಮಾಪನ ಕಾರ್ಯಕ್ರಮವಾಗಿದ್ದು, ಮಹಿಳೆಯರ ಮುಟ್ಟಿನ ಕುರಿತಂತೆಯ ಗ್ರಾಮೀಣ ಭಾಗದ ಮಹಿಳೆಯರಿಗೆ ಮಾಹಿತಿ ಒದಗಿಸುವ ಹಾಗೂ ಅರಿವು ಮೂಡಿಸುವ ಸಂಶೋಧನೆಯು ಇದಾಗಿದೆ.

ಇದನ್ನೂ ಓದಿ: 💠ಉಜಿರೆ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ನಿರ್ಮಾಣದ ಕಾರ್ಯಾಲಯ ಉದ್ಘಾಟನೆ

ಕಾಲೇಜಿನ ಪ್ರಾoಶುಪಾಲರು ಸಂಶೋಧನೆಯ ಕುರಿತಂತೆ ಮಾತನಾಡಿ ಶುಭಹಾರೈಸಿದರು. ಪ್ರೊಫೆಸರ್ ಡೇವಿಡ್ ಲೆವಿನ್ ಇವರು ಸಂಶೋಧನೆಯ ಬಗ್ಗೆ ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಿದರು ಹಾಗೂ ಮುಂದಿನ ಸಂಶೋಧನೆ ಯಲ್ಲಿನ ಬದಲಾವಣೆಗಳ ಬಗ್ಗೆಯು ವಿವರಣೆಯನ್ನು ನೀಡಿದರು.ಪ್ರಾಧ್ಯಾಪಕರಾದ ಡಾ. ಧನೇಶ್ವರಿ ಸಂಶೋಧನೆಯ ಕಿರು ಕುರಿತಂತೆ ವಿವರಣೆವನ್ನು ಪ್ರಸ್ತಾಪಿಸಿದರು.

ಕಾಲೇಜಿನ ಪ್ರಾಂಶುಪಾಲರದ ಪ್ರೊಫೆಸರ್ ವಿಶ್ವನಾಥ ಪಿ., ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ರವಿಶಂಕರ್ ಕೆ., ಹಾಗೂ ಅಮೆರಿಕಾದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಪ್ರೊಫೆಸರ್ ಆದ ಡೇವಿಡ್ ಲೆವಿನ, ಜೊತೆಗೆ ಧರ್ಮಸ್ಥಳ ಜ್ಞಾನವಿಕಾಸ ಕೇಂದ್ರದ ರಾಜ್ಯಮಟ್ಟದ ಪ್ರಾಜೆಕ್ಟ್ ಆಫೀಸರ್ ಆದಂಥಹ ಶ್ರೀಮತಿ ಸಂಗೀತ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಧನೇಶ್ವರಿ, ಹಾಗೂ ಜ್ಞಾನವಿಕಾಸ ಕೇಂದ್ರದ ತಾಲೂಕು ಸಂಯೋಜಕರು, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಮಾಜಕಾರ್ಯವಿಭಾಗದ ಅಶ್ವಿನಿ ಸ್ವಾಗತಿಸಿ, ವೀಕ್ಷಿತಾ ಕೋಟ್ಯಾನ್ ಧನ್ಯವಾದವಿತ್ತರು, ಪ್ರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *