Mon. Mar 10th, 2025

DIGANTH MISSING CASE: ಫರಂಗಿಪೇಟೆ ದಿಗಂತ್‌ ನಾಪತ್ತೆ ಪ್ರಕರಣ – ಸದನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದೇನು?

ಬಂಟ್ವಾಳ:(ಮಾ.5) ಫೆ.25 ರ ಸಂಜೆ ಏಕಾಏಕಿ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್‌ ಪತ್ತೆಗೆ ಪೊಲೀಸ್‌ ತನಿಖೆ ಮುಂದುವರಿದರೂ ಆತನ ಬಗ್ಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ☪ಬೆಳ್ತಂಗಡಿ: ರಂಝಾನ್ ಪ್ರಯುಕ್ತ ಮದ್ದಡ್ಕದಲ್ಲಿ ವಿಶಿಷ್ಟ ಕಾರ್ಯಕ್ರಮ

ಪ್ರಕರಣ ಇನ್ನಷ್ಟೂ ನಿಗೂಢತೆಯನ್ನು ಉಂಟು ಮಾಡಿದೆ. ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆ ಹಿಂದೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು, ಪೋಲಿಸ್ ಇಲಾಖೆಗೆ ಇದೊಂದು ಸವಾಲಿನ ಪ್ರಕರಣವಾಗಿದೆ ಎಂದು ಹೇಳಲಾಗುತ್ತಿದೆ.
ಈತ ನಾಪತ್ತೆಯಾದ ಬಳಿಕದ ಯಾವೊಂದು ಸುಳಿವು ಸಿಗದೆ ಇರುವುದು ಇಕ್ಕಟ್ಟಿನ ಸ್ಥಿತಿಯನ್ನು ತಂದೊಡ್ಡಿದೆ ಎಂದು ಹೇಳಲಾಗಿದೆ.

ದಿಗಂತ್ ಫೆ.25 ರಂದು ಸಂಜೆ ಸುಮಾರು 7 ರ ಸುಮಾರಿಗೆ ಫರಂಗಿಪೇಟೆ ಆಂಜನೇಯ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ವಿದ್ಯಾರ್ಥಿ , ದೇವಸ್ಥಾನಕ್ಕೂ ಹೋಗದೆ ನಾಪತ್ತೆಯಾಗಿದ್ದಾನೆ. ಪೂಜೆ ಮುಗಿದು ಮನೆಗೆ ಬರಬೇಕಾಗಿದ್ದ ದಿಗಂತ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು 9 ಗಂಟೆಯ ಬಳಿಕ ಊರವರ ಸಹಕಾರದಿಂದ ರಾತ್ರಿ ಮೂರು ಗಂಟೆವರೆಗೂ ಹುಡುಕಾಡಿದ್ದಾರೆ. ಈ ಸಂದರ್ಭದಲ್ಲಿ ರೈಲ್ವೆ ಹಳಿಯಲ್ಲಿ ಈತನ ಚಪ್ಪಲಿ ಹಾಗೂ ಮೊಬೈಲ್ ದೊರಕಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡು ಬಂದಿದೆ. ಬೆಳಿಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.

ಈ ಪ್ರಕರಣವನ್ನು ವಿಧಾನಸಭೆಯಲ್ಲಿ ಯು.ಟಿ. ಖಾದರ್‌ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಮಧು ಬಂಗಾರಪ್ಪ ಮಾತನಾಡಿ, ಎಸ್ಪಿ ಯವರ ನೇತೃತ್ವದಲ್ಲಿ 7 ತಂಡಗಳನ್ನು ಮಾಡಿದ್ದಾರೆ. ದಿಗಂತ್‌ ನ ಮೊಬೈಲ್‌ ಗೆ 16 ಡಿಜಿಟ್‌ ನ ಸೆಕ್ಯೂರಿಟಿ ಕೋಡ್‌ ಹಾಕಿಕೊಂಡಿದ್ದಾನೆ. ಆದಷ್ಟೂ ಬೇಗ ಆತನನ್ನು ಹುಡುಕಿಕೊಡುವ ಪ್ರಯತ್ನದಲ್ಲಿ ಪೋಲಿಸರು ಇದ್ದಾರೆ ಎಂದು ಹೇಳಿದರು.

ಇದಕ್ಕೆ ಪ್ರತ್ಯುತ್ತರವಾಗಿ ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ, ದಿಗಂತ್ ನಾಪತ್ತೆಯಾಗಿ 9 ದಿನವಾಗಿದೆ. 9 ದಿನವಾದ್ರೂ ಕೂಡ 5 ತಂಡ ಮಾಡಿದ್ದೀರಿ, 6 ತಂಟ ಮಾಡಿದ್ದೀರಿ ಅಂತ ಹೇಳ್ತಿದ್ದೀರಾ, ಹಾಗಂತ ನಾನು ಸರ್ಕಾರವನ್ನು ದೂರುತ್ತಾ ಇದ್ದೀನಿ ಅಂತ ಅರ್ಥ ಅಲ್ಲ.ಮನೆಯಿಂದ ಹೊರ ಹೋದಂತ ಒಬ್ಬ ವಿದ್ಯಾರ್ಥಿ ಇಲ್ಲಿ ತನಕ ಪತ್ತೆಯಾಗಿಲ್ಲ ಅಂದ್ರೆ ಸಹಜವಾಗಿಯೇ ಆತಂಕವಾಗುತ್ತದೆ.ಆತ ವಿವಿಧ ಸಂಘ ಸಂಸ್ಥೆಯಲ್ಲಿ ಪಾಲ್ಗೊಳ್ಳುತ್ತಿದ್ದ ಎಂದು ಕೂಡ ತಿಳಿದು ಬಂದಿದೆ. ಇದನ್ನೂ ಖಂಡಿಸಿ ಫರಂಗಿಪೇಟೆಯಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಯೂ ಕೂಡ ಆಗಿತ್ತು. ಇವತ್ತು ಸರ್ಕಾರ ಇದನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಊಹಾಪೋಹಗಳೇ ಹೆಚ್ಚಾಗುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *