Mon. Mar 10th, 2025

Manipal: ಸಿನಿಮಾ ಸ್ಟೈಲ್​ನಲ್ಲಿ ಪೊಲೀಸರ ರೋಚಕ ಚೇಸಿಂಗ್ – ಯುವತಿಯೊಂದಿಗೆ ಜಾಲಿ ಮಾಡಲು ಬಂದಿದ್ದ ಗರುಡ ಗ್ಯಾಂಗ್​ ನ ಕ್ರಿಮಿನಲ್ ಅರೆಸ್ಟ್

ಮಣಿಪಾಲ(ಮಾ.5): ಮಣಿಪಾಲದಲ್ಲಿ ಸಿನಿಮೀಯ ಸ್ಟೈಲ್​ನಲ್ಲಿ ಪೊಲೀಸರ ರೋಚಕ ಕಾರ್ಯಚರಣೆಯೊಂದು ನಡೆದಿದೆ. ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ಚೇಸಿಂಗ್ ಮಾಡುವ ವೇಳೆ ಸರಣಿ ಅಪಘಾತಗಳು ಸಂಭವಿಸಿದೆ. ಆದರೂ, ಮಣಿಪಾಲ ಪೋಲೀಸರ ಸಮಯ ಪ್ರಜ್ಞೆಯಿಂದ ಕುಖ್ಯಾತ ಗ್ಯಾಂಗ್​ನ ಸದಸ್ಯನ ಬಂಧನವಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ: “ಬಿ” ಖಾತೆಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕಲಾಪದಲ್ಲಿ ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್

ಕುಖ್ಯಾತ ಗರುಡ ಗ್ಯಾಂಗ್​ನ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಸ್ಸಾಕ್​ನ ಬೆನ್ನು ಬಿದ್ದಿದ್ದ ಬೆಂಗಳೂರಿನ ನೆಲಮಂಗಲ ಠಾಣೆ ಪೊಲೀಸರು, ಆರೋಪಿ ಜಾಡು ಹಿಡಿದು ಉಡುಪಿಯ ಮಣಿಪಾಲಕ್ಕೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಓರ್ವ ಯುವತಿಯೊಂದಿಗೆ ಜಾಲಿ ಮಾಡಲು ಮಣಿಪಾಲಕ್ಕೆ ಬಂದಿದ್ದ ಇಸ್ಸಾಕ್ ಎಂಬ ನಟೋರಿಯಸ್ ಕ್ರಿಮಿನಲ್ ಪೊಲೀಸರನ್ನು ಕಂಡ ಕೂಡಲೇ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ವೇಗವಾಗಿ ಗಾಡಿ ಚಲಾಯಿಸಿ ನಾಲ್ಕು ಕಾರು ಹಾಗೂ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ, ನೆಲಮಂಗಲ ಪೊಲೀಸರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದ ತಂಡ ಆರೋಪಿಯನ್ನು ಸಾಹಸಮಯವಾಗಿ ಚೇಸ್ ಮಾಡಿ ಮಣಿಪಾಲದ ಮಣ್ಣಪಳ್ಳದ ಬಳಿ ಕಾರಿನೊಂದಿಗೆ ಸೆರೆ ಹಿಡಿದಿದ್ದಾರೆ. ಒಂದಿಷ್ಟು ಸೆಕೆಂಡ್ ಲೇಟ್ ಆಗಿದ್ದರೂ, ಕ್ರಿಮಿನಲ್ ಇಸ್ಸಾಕ್​ ಮಿಸ್ ಆಗುತ್ತಿದ್ದ. ಆದರೆ, ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಅವರ ತ್ವರಿತ ಕಾರ್ಯಾಚರಣೆ ಫಲ ನೀಡಿದೆ.

ಗರುಡ ಗ್ಯಾಂಗ್, ಈ ಹೆಸರು ಕೇಳಿದ್ರೆ ಉಡುಪಿ-ಮಂಗಳೂರು ಕಡೆ ಯಾರಿಗೂ ನಿದ್ದೆ ಬರಲ್ಲ. ಕಳ್ಳತನ, ಮಾದಕವಸ್ತು ಸರಬರಾಜು, ಕೊಲೆ ಕೇಸುಗಳಲ್ಲಿ ತೊಡಗಿಸಿಕೊಂಡಿರುವ ಈ ಗ್ಯಾಂಗ್​ನ ಹಿಂದೆ ಇಸ್ಸಾಕ್ ತರಹದ ಕ್ರಿಮಿನಲ್ಸ್ ಇದ್ದಾರೆ. ಆದರೆ ಮಣಿಪಾಲ ಪೊಲೀಸರ ಮುಂದೆ ಈ ಆಟ ನಡೆದಿಲ್ಲ ಈ ಸಲ ಸಿಕ್ಕಿಬಿದ್ದಿದ್ದಾನೆ.

Leave a Reply

Your email address will not be published. Required fields are marked *