Mon. Mar 10th, 2025

Belthangady: ವೇಣೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಇರುವ 5 MVA ಶಕ್ತಿ ಪರಿವರ್ತಕವನ್ನು 12.5 MVA ಸಾಮರ್ಥ್ಯಕ್ಕೆ ಬದಲಾವಣೆ – ಸಾರ್ವಜನಿಕರಿಂದ ಸರ್ಕಾರಕ್ಕೆ ಅಭಿನಂದನೆ

ಬೆಳ್ತಂಗಡಿ:(ಮಾ.6) ವೇಣೂರು ಸಬ್ ಸ್ಕ್ರೆಷನ್ ಎರಡು ವಿದ್ಯುತ್ ಫೀಡರ್ಗಳಿದ್ದು ಕಳೆದ ಬಾರಿ ಒಂದು ವಿದ್ಯುತ್ ಫೀಡರನ್ನು 5 ಮೆಗಾವೋಲ್ಟ್ ನಿಂದ 8 ಮೆಗಾ ವೋಲ್ಟ್ ಗೆ ಪರಿವರ್ತಿಸಿ ವೇಣೂರು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರು ಮತ್ತು ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ.

ಇದನ್ನೂ ಓದಿ: ಪುತ್ತೂರು: ಸುಳ್ಯದ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್


ಇದೀಗ ಆಗಾಗ ವಿದ್ಯುತ್ ಕಡಿತವಾಗುವುದರಿಂದ ಈಗ ಬಾಕಿ ಇರುವ ವಿದ್ಯುತ್ ಫೀಡರನ್ನು ಸಹ ಐದು ಮೆಗಾ ವೋಲ್ಟ್ ನಿಂದ 12.5 MVA ಮೆಗಾ ವೋಲ್ಟ್ ಪರಿವರ್ತಿಸಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರದ ಗಮನವನ್ನು ಸೆಳೆಯಬೇಕೆಂದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ಮನವಿಗೆ ಸರ್ಕಾರವು ಪೂರಕವಾಗಿ ಸ್ಪಂದಿಸಿ ಇಂದು ಇಲಾಖೆಯು ವೇಣೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಇರುವ 5 MVA ಶಕ್ತಿ ಪರಿವರ್ತಕವನ್ನು 12.5 MVA ಸಾಮರ್ಥ್ಯಕ್ಕೆ ಬದಲಾವಣೆ ಮಾಡಿ ಅಳವಡಿಸಲಾಯಿತು.


ಈ ಮೂಲಕ ಈ ಭಾಗದ ಬಹು ಕಾಲದ ರೈತರ ಸಾರ್ವಜನಿಕರ ಬೇಡಿಕೆ ಈಡೆರಿದಂತಾಯಿತು ಎಂದು ಸಾರ್ವಜನಿಕರು ಸರ್ಕಾರಕ್ಕೆ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *