Mon. Mar 10th, 2025

Belthangady: 800 ವರ್ಷಗಳ ಇತಿಹಾಸ ಹೊಂದಿರುವ  ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೇಳ – ಕಾಶಿಪಟ್ಣದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಸಂಭ್ರಮ

ಬೆಳ್ತಂಗಡಿ:(ಮಾ.6) ಬೆಳ್ತಂಗಡಿಯ ಕಾಶಿಪಟ್ಣದಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ನಡೆಯುತ್ತಿದೆ. ಮಾರ್ಚ್‌ 3 ರಿಂದ ಆರಂಭವಾದ ಜಾತ್ರಾ ಮಹೋತ್ಸವವು ಮಾರ್ಚ್‌ 7 ರವರೆಗೆ ಜರುಗಲಿದೆ.

ಇದನ್ನೂ ಓದಿ: ಉಡುಪಿ: ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಸುಮಾರು 150 ಸದಸ್ಯರಿಂದ

ಕಾಶಿಪಟ್ಣದಲ್ಲಿರುವ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವೇ ಇದೆ. ಬೇಡಿಕೊಂಡ ಇಷ್ಟಾರ್ಥಗಳನ್ನು ಶ್ರೀ ಪಂಚಲಿಂಗೇಶ್ವರ ದೇವರು ಈಡೇರಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ವಿವಾಹ, ಸಂತಾನ ಭಾಗ್ಯದ ಹರಕೆ ಹೇಳಿಕೊಂಡರೆ, ಆ ಹರಕೆಯು ನೆರವೇರುತ್ತದೆ ಎಂಬ ನಂಬಿಕೆ ಇದೆ.


ಹಳ್ಳಿ ಪ್ರದೇಶದಲ್ಲಿರುವ ಒಂದು ವಿಶೇಷವಾದ ಶಕ್ತಿ ಇರುವಂತಹ ದೇವಸ್ಥಾನ ಅಂದ್ರೆ ಅದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ. ಊರಿನ ಭಕ್ತರು ಮಾತ್ರವಲ್ಲದೇ ಪರವೂರಿನ ಭಕ್ತರು ಕೂಡ ಈ ದೇವಸ್ಥಾನಕ್ಕೆ ಬಂದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಶ್ರೀ ಪಂಚಲಿಂಗೇಶ್ವರ ದೇವರ ಜೊತೆಗೆ ಪರಿವಾರ ದೇವರಾಗಿ ಆದಿಶಕ್ತಿ ಹಾಗೂ ಮಹಾಗಣಪತಿ , ಅಲ್ಲದೇ ವಿಶೇಷವಾಗಿ ಅನಂತಪದ್ಮನಾಭ ದೇವರು ಕೂಡ ನೆಲೆನಿಂತಿದ್ದಾರೆ.

1970 ರಲ್ಲಿ ದೇವಸ್ಥಾನದ ಸುತ್ತುಗೋಪುರ ಮುಳಿ ಯಲ್ಲಿ ಆಗಿದ್ದು, ಗರ್ಭಗುಡಿ ಹಂಚಿ ಹೊದಿಕೆಯಾಗಿತ್ತು. ಸುಬ್ರಾಯ ಅಸ್ರಣ್ಣರು ಹಾಗೂ ಪದ್ಮರಾಜ್‌ ರವರ ನೇತೃತ್ವದಲ್ಲಿ , ಹಾಗೂ ಊರಿನವರ ಸಹಕಾರದೊಂದಿಗೆ ಸುತ್ತುಪೌಳಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಹಕಾರದಲ್ಲಿ ಸುತ್ತು ಪೌಳಿ ಹಾಗೂ ಗರ್ಭಗುಡಿಯ ಜೀರ್ಣೋದ್ಧಾರವು ನೆರವೇರಿತು. 1994 ರಲ್ಲಿ ಬ್ರಹ್ಮಕಲಶೋತ್ಸವವು ಜರುಗಿತು.

ನಂತರ ದೇವಸ್ಥಾನವನ್ನು ಸಂಪೂರ್ಣವಾಗಿ ಪುನರ್ಜೀವನಗೊಳಿಸುವ ಉದ್ದೇಶದೊಂದಿಗೆ ಶಿಲಾಮಯ ಮಾಡಿ , ತಾಮ್ರದ ಹೊದಿಕೆಯನ್ನು ಹಾಕಿ 2014 ರಲ್ಲಿ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವವನ್ನು ಮಾಡಲಾಯಿತು. ಊರಿನ – ಪರವೂರ ಸಹಕಾರದೊಂದಿಗೆ ಭವ್ಯವಾದ ದೇವಸ್ಥಾನವು ಅಭಿವೃದ್ಧಿಯಾಗಿದೆ.

Leave a Reply

Your email address will not be published. Required fields are marked *