Mon. Mar 10th, 2025

Belthangady: ಗುರುದೇವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ನಿಧನ

ಬೆಳ್ತಂಗಡಿ:(ಮಾ.6) ಕುಕ್ಕಿನಡ್ಡ ಕುಟುಂಬ ಮನೆತನದ ಹಿರಿಯರಾಗಿದ್ದ, ನಿವೃತ್ತ ಡಿಎಫ್ ಓ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ (87) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ.6ರಂದು ಬೆಳಿಗ್ಗೆ ವಿಧಿವಶರಾದರು.

ಮಾಜಿ ಶಾಸಕ ಕೆ.ವಸಂತ ಬಂಗೇರರ ಆತ್ಮೀಯ ಸಲಹೆಗಾರರೂ, ಮಾರ್ಗದರ್ಶಕರೂ ಆಗಿದ್ದ ಇವರು, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ್ದರು. ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಪ್ರಗತಿಯ ಹಿಂದೆ ಮಾಣಿಂಜರವ ದೂರದೃಷ್ಟಿ ಚಿಂತನೆ ಮತ್ತು ಪ್ರಯತ್ನ ಮಹತ್ತರವಾದದು.

ಸರಳ, ನೇರ ನಿಷ್ಠುರವಾದಿ ವ್ಯಕ್ತಿತ್ವವನ್ನು ಹೊಂದಿದ್ದ ಇವರು ಪತ್ನಿ ಇಂದಿರಾ, ಪುತ್ರರಾದ ಸೂರಜ್ ಸುಧೀರ್, ಸುಜಿತ್, ಸೊಸೆಯಂದಿರಾದ ಸ್ನೇಹ, ಟೀನಾ, ದಿವ್ಯ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.


ಪದ್ಮನಾಭ ರವರ ಪಾರ್ಥಿವ ಶರೀರದ ಅಂತಿಮ ದರ್ಶನ 12 ಗಂಟೆಯ ತನಕ ಬಲ್ಮಠದ “ಇಂದುಪದ್ಮ” ನಿವಾಸದಲ್ಲಿ ನಡೆಯಲಿದ್ದು, ತದನಂತರ ಪುಂಜಾಲಕಟ್ಟೆ ಮಾಣಿಂಜದ ಸ್ವಗೃಹದಲ್ಲಿ 4 ಗಂಟೆಯ ತನಕ ಅಂತಿಮ ದರ್ಶನ ನಡೆದು ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *