ಧರ್ಮಸ್ಥಳ : (ಮಾ.6) ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕನ್ಯಾಡಿ – 2 ಯಲ್ಲಿ ಬಂಟರ ಯಾನೆ ನಾಡವರ ಸಂಘ(ರಿ) ಬೆಳ್ತಂಗಡಿ ಬಂಟರ ಮಹಿಳಾ ವಿಭಾಗದಿಂದ “ಸ್ಪರ್ಶ ” ಹೆಣ್ಣು ಮಕ್ಕಳ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಇದನ್ನೂ ಓದಿ: 🛑ವಿಟ್ಲ: ಮಾಡತ್ತಡ್ಕದಲ್ಲಿ ಭಾರೀ ಸ್ಫೋಟ ಪ್ರಕರಣ
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ದೀಪಾ ಕೊಠರಿ ( ನಿರ್ದೇಶಕರು ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಟ್ರೈನಿಂಗ್ ) ಇವರು “ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಹೆಣ್ಣು ಮಕ್ಕಳು ಯಾವ ರೀತಿ ಜಾಗೃತಿಯನ್ನು ವಹಿಸಿಕೊಳ್ಳಬೇಕು, ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ” ಈ ಕುರಿತಾಗಿ ಮಾಹಿತಿಯನ್ನು ಸವಿಸ್ತಾರವಾಗಿ ನೀಡಿದರು.


ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಯಲಕ್ಷ್ಮಿ ಸಾಮಾನಿ (ಅಧ್ಯಕ್ಷರು ಬಂಟರ ಮಹಿಳಾ ವಿಭಾಗ )ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ.ಎನ್, ಎಸ್ ಡಿ ಎಂ ಸಿ ಉಪಾಧ್ಯಕ್ಷರು ಚಂದ್ರಾವತಿ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಯನ್ನು ಜಯಲಕ್ಷ್ಮಿ ಸಾಮಾನಿ ಅವರು ನಡೆಸಿಕೊಟ್ಟರು. ಬಂಟರ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೇಯ ಶೆಟ್ಟಿ ವಂದನಾರ್ಪಣೆಯನ್ನು,

ಬಂಟರ ಮಹಿಳಾ ವಿಭಾಗದ ನಿರ್ದೇಶಕರಾದ ಉಷಾ ಶಶಿಧರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಮತ್ತು ಶಾಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಮಧ್ಯಾಹ್ನದ ಬಿಸಿ ಊಟಕ್ಕೆ ಸಿಹಿ ಹಂಚಲಾಯಿತು.
