Mon. Mar 10th, 2025

Udupi: ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಸುಮಾರು 150 ಸದಸ್ಯರಿಂದ ಕೂಳೂರಿನಿಂದ ಕಾವೂರು ಹೆದ್ದಾರಿಯಲ್ಲಿ ಸ್ವಚ್ಚತಾ ಅಭಿಯಾನ

ಉಡುಪಿ:(ಮಾ.6) ಮಾರ್ಚ್ 2 ರಂದು ಪ್ರತಿಷ್ಠಾನದ ಸ್ಥಾಪಕರಾದ ಡಾ. ನಾನಾ ಸಾಹೇಬ್ ಧರ್ಮಾಧಿಕಾರಿಯವರ ಹುಟ್ಟು ಹಬ್ಬದ ಪ್ರಯುಕ್ತ ಪದ್ಮಶ್ರೀ ಅಪ್ಪ ಸಾಹೇಬ್ ಧರ್ಮಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಭಾರತ ದೇಶದಾದ್ಯಂತ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನ 2025 ನ್ನು ಉಡುಪಿ ಮತ್ತು ಮಂಗಳೂರು ವಿಭಾಗದ 150 ಸದಸ್ಯರು ಕೂಳೂರು ಹೆದ್ದಾರಿ ಸೇತುವೆ ಬಸ್ ಸ್ಟಾಂಡ್ ಬಳಿ ಯಿಂದ ಪ್ರಾರಂಭಿಸಿ ಕಾವೂರು ರಸ್ತೆ ಯ 3-5 ಕಿ ಮೀ ಅಂತರದ ತ್ಯಾಜ್ಯ ಹೆಕ್ಕಿ ಸ್ವಚ್ಚ ಗೊಳಿಸಿದರು.

ಇದನ್ನೂ ಓದಿ: ⭕Manipal: ಯುವತಿಯೊಂದಿಗೆ ಜಾಲಿ ಮಾಡಲು ಬಂದಿದ್ದ ಗರುಡ ಗ್ಯಾಂಗ್​ ನ ಆರೋಪಿಯನ್ನು ಫಿಲ್ಮಿ ಸ್ಟೈಲ್ ನಲ್ಲಿ ಬಂಧಿಸಲು ಯತ್ನಿಸಿದ ಪೊಲೀಸರು!

ಬೆಳಿಗ್ಗೆ 7 ಗಂಟೆ ಗೆ 150 ಸದಸ್ಯರ ಗುಂಪು ರಸ್ತೆಯ ನಾಲ್ಕು ಭಾಗದಲ್ಲಿ ತ್ಯಾಜ್ಯ ತೆಗೆಯಲು ಪ್ರಾರಂಭ ಮಾಡಿ ಮದ್ಯಾಹ್ನ 11 ಗಂಟೆಗೆ 6ರಿಂದ 7 ಟನ್ ತ್ಯಾಜ್ಯ ಸಂಗ್ರಹಿಸಿ, ಶಿಸ್ತು ಬದ್ದವಾಗಿ ಸೇವೆ ಮಾಡಿದರು. ಈ ಭೂಮಿಯ ಋಣ ಮನುಷ್ಯ ರಾಧಾ ನಮ್ಮ ಮೇಲೆ ಇರುವುದರಿಂದ ಮಣ್ಣನ್ನು, ನೀರನ್ನು, ಗಾಳಿಯನ್ನು ಮತ್ತು ಹಸಿರನ್ನು ಕಾಪಾಡುವುದು ಮಾನವೀಯ ಧರ್ಮವಾಗಿದೆ. ನಾವು ಎಷ್ಟೇ ಆಧುನಿಕ ಮತ್ತು ತಾಂತ್ರಿಕ ಬದುಕು ಮಾಡುತ್ತಿದ್ದರೂ, ಪೃಕೃತಿಯ ಸೇವೆ ಆಗಲೇಬೇಕು.

ಈ ಬಗ್ಗೆ ಪ್ರತಿಷ್ಠಾನವು ಹಲವಾರು ದಶಕ ಗಳಿಂದ ಹಲವಾರು ಸಾಮಾಜಿಕವಾಗಿ ಕಾರ್ಯಕ್ರಮಗಳ ಅಭಿಯಾನ ಮಾಡುತ್ತಿದೆ. ಈಗಾಗಲೇ ಪ್ರತಿಷ್ಠಾನಕ್ಕೆ ರಾಷ್ಟ್ರಿಯ ಮತ್ತು ಅಂತ ರಾಷ್ಟ್ರಿಯ (ಪದ್ಮಶ್ರೀ, ಲಿಮಿಕ )ಪುರಸ್ಕಾರ ಗಳು ಬಂದಿವೆ. ಸಾಮಾಜಿಕ ಪಿಡುಗುಗಳ ಅಖಂಡ ಚಿಂತನೆ ಮಾಡುತ್ತಿರುವ ಪ್ರತಿಷ್ಠಾನ ಕೋಟ್ಯಂತರ ಜನರಿಗೆ ಮಾನವೀಯ ನೀತಿ ಮೂಲ್ಯಗಳ ಅಧ್ಯಾತ್ಮಿಕ ಶಿಕ್ಷಣ ಪ್ರಪಂಚ ದಾದ್ಯಂತ ನೀಡುತ್ತಿದ್ದೂ, ಮಂಗಳೂರು ಭಾಗದಲ್ಲೂ ಸುಮಾರು 250 ಕ್ಕೂ ಹೆಚ್ಚು ಸ್ತ್ರೀ, ಪುರುಷ ರು ಮತ್ತು ಮಕ್ಕಳು ಭಾಗವಹಿಸುತ್ತಾರೆ. ಎಲ್ಲರಿಗೂ ಸಾಮಾಜಿಕವಾಗಿ ಮಾದರಿ ಕಾರ್ಯಕ್ರಮಗಳು ತಮ್ಮ ಸದಸ್ಯರ ಮೂಲಕ ಮಾಡಿಸುತ್ತಿದ್ದೂ ಎಲ್ಲರೂ ಭಾಗವಹಿಸಿ ಸಮಾಧಾನದ ಬದುಕು ಸಾಗಿಸ ಬೇಕೆಂದು ಪ್ರತಿಷ್ಠಾನದ ಉದ್ದೇಶವಾಗಿದೆ.

ನಾನು ಸ್ವಚ್ಛವಾಗಿ ಬದುಕಬೇಕು, ಪರಿಸರ ವನ್ನು ಸ್ವಚ್ಛವಾಗಿ ಇಡಬೇಕು ಎಂಬ ಧ್ಯೇಯ ದೊಂದಿಗೆ ಎಲ್ಲರು ಸ್ವಚ್ಛ ವಾಗಿರಿ ಎಂದು ಪ್ರತಿಷ್ಠಾನದ ಶ್ರೀ ಸದಸ್ಯ ಸಂತೋಷ್ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಸಂಸ್ಥೆಯ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಕೂಳೂರು ವಾರ್ಡ್ ನ ಮಹಾನಗರ ಪಾಲಿಕ ಸದಸ್ಯ ಅನಿಲ್ ಕುಮಾರ್ ಪೂಜಾ ರಿ ಮಾನವ ಬದುಕಿಗೆ ಮಾರ್ಗದರ್ಶನ ಮಾಡುತ್ತಿರುವ ಮಹಾನ್ ಸಂತ ಡಾ. ನಾನಾ ಸಾಹೇಬ್ ಪ್ರತಿಷ್ಠಾನ ಮತ್ತು ಸ್ವಚ್ಛತೆ ಸೇವೆ ಮಾಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ತ್ಯಾಜ್ಯ ಸಾಗಿಸಲು ಬೇಕಾದ ವಾಹನ ದ ವ್ಯವಸ್ಥೆಯನ್ನು ಮಾಡಿದ ಅನಿಲ್ ಕುಮಾರ್ ಪೂಜಾರಿ , ಎಲ್ಲರಿಗೂ ನಿಲ್ಲಲು ಸ್ಥಳವಕಾಶ ಮತ್ತು ಊಟ ಉಪಹಾರ ದ ವ್ಯವಸ್ಥೆ ಮಾಡಿದ ಉದ್ಯಮಿ ಅಶೋಕ್ ಶೆಟ್ಟಿ ಮತ್ತು ಶ್ರೀ ಬಿಲ್ಡರ್ ಮಾಲಕ ಗಿರೀಶ್ ಶೆಟ್ಟಿ, ಸಮಾಜ ಸೇವಕ ಚಂದ್ರಹಾಸ್ ಶೆಟ್ಟಿ ಮತ್ತು ಸ್ವಚ್ಛತಾ ಕಾರ್ಯಕ್ರಮ ದ ಸಂಪೂರ್ಣ ಉಸ್ತುವಾರಿ ಮತ್ತು ಸಹಕಾರ ಮಾಡಿದ ನಾಗಪ್ಪ ಪೂಜಾರಿ ಇವರೆಲ್ಲರಿಗೂ ಪ್ರತಿಷ್ಠಾನವು ವೇದಿಕೆಯಲ್ಲಿ ಗುರುತಿಸಿ ಕೃತಜ್ಞತೆ ಸಲ್ಲಿಸಿತು.

Leave a Reply

Your email address will not be published. Required fields are marked *