Mon. Mar 10th, 2025

Belthangady: ಬೆಳ್ತಂಗಡಿ ವಕೀಲರ ಸಂಘದಿಂದ ನ್ಯಾಯಾಲಯದ ಕಟ್ಟಡ ಮಂಜೂರುಗೊಳಿಸುವಂತೆ ಬೆಂಗಳೂರಿನಲ್ಲಿ ಸಚಿವರುಗಳ ಭೇಟಿ

ಬೆಳ್ತಂಗಡಿ:(ಮಾ.7) ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಅಪರ ಸರ್ಕಾರಿ ವಕೀಲರ ಕಛೇರಿ ಉದ್ಘಾಟನೆ ಮತ್ತು ವಕೀಲರ ಸಂಘದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ರವರು ಬೆಳ್ತಂಗಡಿಯ 60 ವರ್ಷ ಹಳೆಯದಾದ ನ್ಯಾಯಾಲಯದ ಕಟ್ಟಡವನ್ನು ವೀಕ್ಷಿಸಿ ಸರ್ಕಾರದ ಮಟ್ಟದಲ್ಲಿ ಹೊಸ ನ್ಯಾಯಾಲಯದ ಕಟ್ಟಡ ಮಂಜೂರಾತಿಗೆ ಬಜೆಟ್ ನಲ್ಲಿ ಅನುದಾನ ನೀಡಲು ಒತ್ತಡ ತರುವ ಬಗ್ಗೆ ವಕೀಲರ ನಿಯೋಗವನ್ನು ಸಂಬಂಧಪಟ್ಟ ಸಚಿವರ ಬಳಿ ಕರೆದೊಯ್ಯುವ ಭರವಸೆ ನೀಡಿದ್ದರು.

ಇದನ್ನೂ ಓದಿ: 🟠ಧರ್ಮಸ್ಥಳ: ಕನ್ಯಾಡಿ ಸ.ಉ.ಹಿ.ಪ್ರಾ.ಶಾಲೆಗೆ


ಅದರಂತೆ ಮಾರ್ಚ್ 06 ರಂದು ಬೆಂಗಳೂರಿನ ಬಜೆಟ್ ಅಧಿವೇಶನದ ಸಂಧರ್ಭ ವಿಧಾನ ಪರಿಷತ್ ಶಾಸಕರಾದ ಐವನ್ ಡಿ ಸೋಜಾ ರವರ ನೇತೃತ್ವದಲ್ಲಿ ಕಾನೂನು ಸಚಿವರಾದ ಎಚ್. ಕೆ ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಯವರುಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ., ಹಿರಿಯ ವಕೀಲರ ಸಮಿತಿ ಚೇರ್ಮನ್ ಅಲೋಶಿಯಸ್ ಎಸ್ ಲೋಬೋ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ಎ ಮತ್ತು ಮಾಜಿ ಅಧ್ಯಕ್ಷರಾದ ಶಿವ ಕುಮಾರ್ ಎಸ್.ಎಂ ಜೊತೆಗಿದ್ದರು.

Leave a Reply

Your email address will not be published. Required fields are marked *