ಬಿಹಾರ:(ಮಾ.7) ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದ ಭಯಾನಕ ಕೊಲೆ ಪ್ರಕರಣ ಒಂದು ಮತ್ತೆ ಬೆಚ್ಚಿಬೀಳಿಸುವಂತಾಗಿದೆ. ಗುರುತಿಸದ ಯುವತಿಯೊಬ್ಬಳನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ⭕ಬಂಟ್ವಾಳ: ಕಾಲೇಜು ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ

ಹತ್ಯೆಯ ನಿಗೂಢತೆ:
ಈ ದುರ್ಘಟನೆ ಹರ್ನೌತ್ ಬ್ಲಾಕ್‌ನ ಸಾರ್ಥ ಪಂಚಾಯತ್ ವ್ಯಾಪ್ತಿಯ ಬಹದ್ದೂರ್‌ಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು ಹೆದ್ದಾರಿಯ ಹತ್ತಿರದ ಕಾಡಿನಲ್ಲಿ ಯುವತಿಯ ಶವವನ್ನು ಪತ್ತೆ ಹಚ್ಚಿದ್ದಾರೆ. ಶವವನ್ನು ಗಮನಿಸಿದಾಗ ಆಕೆ ಕೆಂಪು ಬಣ್ಣದ ನೈಟಿ ಧರಿಸಿದ್ದಳು ಮತ್ತು ಒಂದು ಕೈಗೆ ಬ್ಯಾಂಡೇಜ್ ಹಾಕಲಾಗಿತ್ತು.

ನರಬಲಿ ಅಥವಾ ಪ್ರೇಮ ಹತ್ಯೆ?
ಈ ಯುವತಿಯ ಹತ್ಯೆಯ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು, ಕೆಲವರು ಇದನ್ನು ಮಾಟ-ಮಂತ್ರ ಅಥವಾ ನರಬಲಿಗೆ ಸಂಬಂಧಿಸಿದೆ ಎಂದು ಶಂಕಿಸುತ್ತಿದ್ದಾರೆ. ಅಲ್ಲದೇ ಯುವತಿಯ ಕೈಗೆ ಬ್ಯಾಂಡೇಜ್ ಇದ್ದ ಕಾರಣ, ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾಳೆ ಮತ್ತು ಪ್ರಕರಣವನ್ನು ಮರೆಮಾಚಲು ಶವವನ್ನು ಇಲ್ಲಿ ಎಸೆದಿರಬಹುದು ಎಂದು ಕೆಲವರು ಸಂಶಯ ವ್ಯಕ್ತವಾಗಿದೆ. ಇನ್ನು ಕೆಲವರು ಯುವತಿಯ ಕೊಲೆಯ ಹಿಂದಿನ ಕಾರಣ ಪ್ರೇಮ ಸಂಬಂಧಿತ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ.

ಪೊಲೀಸರ ತನಿಖೆ
ಈ ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ ತೆಗೆದುಕೊಂಡು ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಹತ್ತಿರದ ಪೊಲೀಸ್ ಠಾಣೆಗಳ ಮೂಲಕ ಯುವತಿಯ ಗುರುತು ಪತ್ತೆ ಮಾಡಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇನ್ನು ಹತ್ಯೆಯ ನಿಜವಾದ ಕಾರಣ ತನಿಖೆಯ ನಂತರವೇ ಬಹಿರಂಗಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

