Mon. Mar 10th, 2025

Karnataka Budget 2025: ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಘೋಷಣೆ?

ಬೆಂಗಳೂರು(ಮಾ. 7) : ಹತ್ತು ಹಲವು ಹೊಸ ಯೋಜನೆಗಳು, ಅಭಿವೃದ್ಧಿ ಪೂರಕ ಅನುದಾನ ಸೇರಿದಂತೆ ರಾಜ್ಯ ಸರ್ಕಾರ ಬಜೆಟ್​​ನಲ್ಲಿ ಈ ವರ್ಷ ಬರೋಬ್ಬರಿ 51 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದೆ. ಇಂತಹ ಬಹುಗಾತ್ರದ ಮಹತ್ವದ ಯೋಜನೆಯ ಜೊತೆಜೊತೆಗೆ ಹತ್ತು ಹಲವು ಘೋಷಣೆಗಳನ್ನೂ ಮಾಡಲಾಗಿದೆ. ನೂತನ ಕಾಲೇಜುಗಳು, ಕಟ್ಟಡಗಳು, ಕಂಪನಿಗಳಿಗೆ ಸಹಕಾರ, ರಸ್ತೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಘೋಷಿಸಲಾಗಿದೆ.

ಇದನ್ನೂ ಓದಿ: 🥃Karnataka Budget 2025: ಅಬಕಾರಿ ಇಲಾಖೆಗೆ ಸಿದ್ದರಾಮಯ್ಯ ಹೊಸ ಟಾರ್ಗೆಟ್

4 ಲಕ್ಷ ಕೋಟಿ ದಾಟಿದ ಬಜೆಟ್ ಗಾತ್ರ:
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್​ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ ರೂ. ಕಳೆದ ವರ್ಷ 3.71 ಲಕ್ಷ ಕೋಟಿ ರೂ. ಬಜೆಟ್ ಗಾತ್ರವಿತ್ತು. ಈ ಬಾರಿ ಈ ಅಂಕಿ 4 ಲಕ್ಷ ಕೋಟಿ ರೂ. ದಾಟಿದೆ. ಅಂದರೆ 4,09,549 ಕೋಟಿ ರೂಪಾಯಿಯ ದಾಖಲೆಯ ಬಜೆಟ್ ಇದಾಗಿದೆ.

ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಾಗೆಯೇ, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಗೆ 34,955 ಕೋಟಿ, ಇಂಧನ ಇಲಾಖೆಗೆ 26,896 ಕೋಟಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್​ಗೆ $26,735 ಕೋಟಿ, ನೀರಾವರಿ ಇಲಾಖೆಗೆ 22,181 ಕೋಟಿ, ನಗರಾಭಿವೃದ್ಧಿ & ವಸತಿ ಇಲಾಖೆಗೆ 21,405 ಕೋಟಿ ಹಾಗೂ ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 20,625 ಕೋಟಿ ಹಣ ಮೀಸಲಿಡಲಾಗಿದೆ.

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ 17,473 ಕೋಟಿ ಮೀಸಲಿಟ್ರೆ, ಕಂದಾಯ ಇಲಾಖೆಗೆ 17,201 ಕೋಟಿ, ಸಮಾಜಕಲ್ಯಾಣ ಇಲಾಖೆಗೆ 16,955 ಕೋಟಿ, ಲೋಕೋಪಯೋಗಿ ಇಲಾಖೆಗೆ ₹11,841 ಕೋಟಿ ಅನುದಾನ ಕೊಡಲಾಗಿದೆ.

ಆಹಾರ & ನಾಗರಿಕ ಸರಬರಾಜು ಇಲಾಖೆಗೆ 8,275 ಕೋಟಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7145 ಕೋಟಿ, ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಗೆ 3,977 ಕೋಟಿ ಹಾಗೂ ಇತರೆ ಇಲಾಖೆಗಳಿಗೆ 1 ಲಕ್ಷ 49 ಸಾವಿರದ 857 ಕೋಟಿ ಅನುದಾನ ಘೋಷಣೆಯಾಗಿದೆ.

ಹೀಗೆ ಎಲ್ಲ ಇಲಾಖೆಗಳಿಗೂ ಅನುಕೂಲಕ್ಕೆ ಅನುಗುಣವಾಗಿ ಬಜೆಟ್ ಹಂಚಿಕೆ ಮಾಡಲಾಗಿದೆ. ಹೊಸ ಯೋಜನೆ, ನೂತನ ಘೋಷಣೆಗಳೊಂದಿಗೆ ಸರ್ಕಾರ ಸಮಗ್ರ ರಾಜ್ಯದ ಅಭಿವೃದ್ಧಿಯ ಗುರಿ ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *