ವೇಣೂರು: (ಮಾ.7) ಕುಂಭಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಮಾ.6 ರಂದು ಹೈಸ್ಕೂಲ್, ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: 🛑ಬೆಳ್ತಂಗಡಿ: ಕರ್ನಾಟಕ ರಾಜ್ಯ ಬಜೆಟ್
ಕಾರ್ಯಕ್ರಮದಲ್ಲಿ “Extra Marks” ಸಂಸ್ಥೆಯ ವ್ಯವಸ್ಥಾಪಕರು ಭರತ್ ರವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಕೆಯಿಂದ ಆಗುವ ಉಪಯೋಗ ಮತ್ತು ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿವರವಾಗಿ ತಿಳಿಸಿದರು.

ಹಾಗೆಯೇ ಎಜುಕೇಶನಲ್ ಇನ್ನೋವೇಟರ್ ಆದ ಅಕ್ಷಯ್ ಕೆ. ಪನಿಕರ್ ಮಾತನಾಡಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಮ್ಮ ಮುಂದಿನ ವಿದ್ಯಾಭ್ಯಾಸದ ಮಜಲುಗಳ ಸಮಗ್ರ ಚಿತ್ರಣವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಂಸ್ಥೆಯ ಆಡಳಿತ ಮಂಡಳಿಯ ಗುಣಾತ್ಮಕ ಚಿಂತನೆಗಳನ್ನು ಪ್ರಸ್ತುತಪಡಿಸಿದರು.
ಸಂಸ್ಥೆಯ ಸಂಚಾಲಕರಾದ ಶ್ರೀಯುತ ಅಶ್ವಿತ್ ಕುಲಾಲ್ ಇವರು ಕಾರ್ಯಾಗಾರವು ಸ್ಪರ್ಧಾತ್ಮಕ ಜಗತ್ತಿನ ಗೊಂದಲದ ಮನೋಸ್ಥಿತಿಗೆ ಒಂದು
ಒಳ್ಳೆಯ ಮಾರ್ಗದರ್ಶನವಾಗಿ ಹಲವಾರು ಜನರಿಗೆ ಪ್ರಯೋಜನಕರವಾಗಿರುವುದು ನಮ್ಮ “IGNITE – 2025” ರ ಸಾರ್ಥಕತೆಯಾಗಿದೆ ಎಂದು
ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕುಂಭಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಇವರು ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಚೈತನ್ಯ ಸ್ವಾಗತಿಸಿ, ಶ್ರೀಶ ವಂದಿಸಿದರು. ರಶ್ವಿತಾ ಮತ್ತು ಸಮೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.
