ಬ್ರಹ್ಮಾವರ (ಮಾ.8): ಮೊಬೈಲ್ ಕೊಡದಿದ್ದ ಸಿಟ್ಟಿಗೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಐರೋಡಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: 🛑ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ
ಮೃತರನ್ನು ಐರೋಡಿ ಗ್ರಾಮದ ಆಶಾ ಎಂಬವರ ಮಗಳು ದಿಶಾ(16) ಎಂದು ಗುರುತಿಸಲಾಗಿದೆ. ಕೋಟ ವಿವೇಕ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಶಾ,


ಪರೀಕ್ಷೆ ಮುಗಿಸಿ ರಜೆಯಲ್ಲಿ ಮನೆಯಲ್ಲಿ ಇದ್ದರು. ಆಕೆ ಮನೆಯಲ್ಲಿ ತಾಯಿಯೊಂದಿಗೆ ಮೊಬೈಲ್ ಕೊಡಬೇಕೆಂದು ಹಠ ಹಿಡಿದಿದ್ದು, ಮೊಬೈಲ್ ನೀಡದಿದ್ದಕ್ಕೆ ಕೋಪಗೊಂಡ ದಿಶಾ, ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.


ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
