ಕಾರ್ಕಳ:(ಮಾ.8) ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಜೆಕಾರಿನಲ್ಲಿ ನಡೆದಿದೆ. ಮರ್ಣೆ ಗ್ರಾಮ ನಿವಾಸಿ ಸಹನ್ (29) ಮೃತ ಯುವಕ.

ಸಹನ್ ರವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಈ ಮೊದಲು ಚಿಕಿತ್ಸೆ ಮಾಡಿಸಿದರೂ ಮದ್ಯಪಾನ ಮಾಡೋದು ಬಿಟ್ಟಿರಲಿಲ್ಲ.


ಇದರಿಂದಲೇ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


