Mon. Mar 10th, 2025

Kerala: ಪರೀಕ್ಷೆಗೆ ಹೋದ ಇಬ್ಬರು ಯುವತಿಯರು ನಾಪತ್ತೆ ..! – ಟವರ್ ಲೊಕೇಶನ್ ಪತ್ತೆಯಾಗಿದ್ದು ಎಲ್ಲಿ ಗೊತ್ತಾ??

ಕೇರಳ:(ಮಾ.8) ಕೇರಳದಲ್ಲಿ ಇಬ್ಬರು ಯುವತಿಯರು ನಾಪತ್ತೆಯಾಗಿದ್ದು, ಪತ್ತೆಗಾಗಿ ಚುರುಕಿನ ತನಿಖೆ ನಡೆಯುತ್ತಿದೆ. ಈ ನಡುವೆ ಅವರ ಕೊನೆಯ ಕರೆ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ⭕ಬ್ರಹ್ಮಾವರ: ಮೊಬೈಲ್ ಕೊಡದ ವಿಷ್ಯಕ್ಕೆ ತಾಯಿಯೊಂದಿಗೆ ಜಗಳ

ಮಾ.05 ರಂದು ಪರೀಕ್ಷೆಗೆ ಹೋಗ್ತೀವಿ ಎಂದು ಮನೆಯಿಂದ ಶಾಲೆಗೆ ಹೋದ ಅಶ್ವತಿ ಮತ್ತು ಫಾತಿಮಾ ಎಂಬ ಇಬ್ಬರು ಹೆಣ್ಣುಮಕ್ಕಳು , ಸಂಜೆಯಾದರೂ ಮನೆಗೆ ಹಿಂತಿರುಗಲಿಲ್ಲ. ಅಶ್ವತಿ ಮತ್ತು ಫಾತಿಮಾ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಶಿಕ್ಷಕರು ಸ್ಪಷ್ಟಪಡಿಸಿದ್ದಾರೆ. ಇದನ್ನು ಗಮನಿಸಿದ ಪೋಷಕರು, ತಮ್ಮ ಮಕ್ಕಳಿಗಾಗಿ ಹಲವೆಡೆ ಹುಡುಕಾಡಿದ್ದಾರೆ. ಪ್ರಯತ್ನಗಳು ವಿಫಲಗೊಂಡ ಬೆನ್ನಲ್ಲೇ ಪೊಲೀಸರಿಗೆ ಮಕ್ಕಳು ನಾಪತ್ತೆಯಾದ ವಿಷಯವನ್ನು ಮುಟ್ಟಿಸಿದ್ದಾರೆ.

ದೂರು ದಾಖಲಿಸಿಕೊಂಡ ಥನೂರ್ ಪೊಲೀಸರು, ಹುಡುಗಿಯರ ಮೊಬೈಲ್ ಫೋನ್‌ಗಳು ಕೊನೆಯದಾಗಿ ಆನ್ ಆಗಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಇಬ್ಬರ ಫೋನ್​ನ ಕೊನೆಯ ಟವರ್ ಲೊಕೇಶನ್ ಕೋಝಿಕ್ಕೋಡ್‌ನಲ್ಲಿರುವುದು ತಿಳಿದುಬಂದಿದೆ. ತಕ್ಷಣವೇ ತಮ್ಮ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ತನಿಖೆಯನ್ನು ಕೋಝಿಕ್ಕೋಡ್​ನಿಂದ ಪ್ರಾರಂಭಿಸಿದ್ದಾರೆ.

ಇಬ್ಬರೂ ತಿರೂರ್‌ನಿಂದ ರೈಲು ಹತ್ತಿ ಕೋಝಿಕ್ಕೋಡ್ ತಲುಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎಡವಣ್ಣ ಹೆಸರಿನ ಸಿಮ್ ಕಾರ್ಡ್‌ನಿಂದ ಇಬ್ಬರೂ ಹುಡುಗಿಯರ ಮೊಬೈಲ್ ಫೋನ್‌ಗಳಿಗೆ ಕರೆ ಬಂದಿದ್ದು, ಆ ಸಿಮ್ ಕಾರ್ಡ್ ಲೋಕೇಶನ್​ ಪ್ರಸ್ತುತ ಮಹಾರಾಷ್ಟ್ರದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *