ಮಂಗಳೂರು:(ಮಾ.8) ಪರೀಕ್ಷೆ ಬರೆದು ಮನೆಗೆ ಬಂದಿದ್ದ ಹುಡುಗ ಮತ್ತೆ ಮನೆಯಿಂದ ತೆರಳಿ ನಾಪತ್ತೆಯಾದ ಮೂಡುಪೆರಾರ ಗ್ರಾಮದ ಅರ್ಕೆಪದವು ಹೌಸ್ ನಿವಾಸಿ ನಿತೇಶ್ ಬೆಳ್ಚಡ (19) ಎಂಬಾತನ ಸುಳಿವು ಇನ್ನೂ ಲಭ್ಯವಾಗಿಲ್ಲ.

ಇದನ್ನೂ ಓದಿ: 🛑Kerala: ಪರೀಕ್ಷೆಗೆ ಹೋದ ಇಬ್ಬರು ಯುವತಿಯರು ನಾಪತ್ತೆ ..!
ಈತ ಫೆ.15ರಂದು ನಾಪತ್ತೆಯಾಗಿದ್ದು, ಈತನ ಪತ್ತೆಹಚ್ಚುವಂತೆ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಬಿತ್ತರಿಸಲಾಗಿದೆ. ಆದರೆ ಇಷ್ಟು ದಿನಗಳಾದರೂ ಈತನ ಸುಳಿವು ಲಭ್ಯವಾಗದಿರುವುದು ಆತಂಕಕ್ಕೆ ಕಾರಣವಾಗಿದೆ.
ದುಂಡುಮುಖ, ಗುಂಗುರು ಕೂದಲು 5.5 ಅಡಿ ಎತ್ತರ ಇರುವ ನಿತೇಶ್ ನಾಪತ್ತೆಯಾದ ದಿನ ಇಂಗಿಷ್ ಅಕ್ಷರಗಳಿರುವ ಕೆಂಪು ಬಣ್ಣದ ಟಿ-ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದ ಈ ಹುಡುಗನನ್ನು ಪತ್ತೆಹಚ್ಚಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.




ಯುವಕನನ್ನು ಎಲ್ಲಿಯಾದರೂ ಕಂಡು ಬಂದಲ್ಲಿ ಬಜಪೆ ಪೊಲೀಸ್ ಠಾಣೆಯ ಸಂಪರ್ಕ ಸಂಖ್ಯೆ 9448622610 ಅಥವಾ 08242 – 22053ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬಜ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
