Mon. Mar 10th, 2025

Belthangady: ಅನೀಶ್ ನಿರ್ದೇಶನದ “ದಸ್ಕತ್” ತುಳು ಚಿತ್ರಕ್ಕೆ ಪ್ರಶಸ್ತಿ

ಬೆಳ್ತಂಗಡಿ,ಮಾ.10(ಯು ಪ್ಲಸ್ ಟವಿ): ಬೆಂಗಳೂರಿನಲ್ಲಿ ಶನಿವಾರ ನಡೆದ ಬೆಂಗಳೂರು 16ನೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಾಘವೇಂದ್ರ ಕೆ.ನಿರ್ಮಾಣದ, ಅನೀಶ್ ಅಮೀನ್ ನಿರ್ದೇಶನದ “ದಸ್ಕತ್” ಚಿತ್ರವು ದ್ವಿತೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಇದನ್ನೂ ಓದಿ: 🟣ಕಡಬ: ಇಷ್ಟಾರ್ಥ ಸಿದ್ಧಿಗಾಗಿ ತಾಳಮದ್ದಳೆ ಸೇವೆಯ ಆರಂಭ

ಕನ್ನಡ ಇತರ ಚಿತ್ರಗಳೊಂದಿಗೆ ಕರಾವಳಿಯ ಯುವಕರೇ ಸೇರಿದ ನಿರ್ಮಿಸಿದ ಈ ತುಳುಚಲನ ಚಿತ್ರವು ಈ ಪ್ರಶಸ್ತಿಯನ್ನು ಬಾಚಿಕೊಂಡಿದೆ. ತೃತೀಯ ಪ್ರಶಸ್ತಿಯನ್ನು ಕರಾವಳಿಯ ಇನ್ನೊಂದು ತುಳು ಚಿತ್ರವಾದ ಸಂತೋಷ್ ಮಾಡ ನಿರ್ದೇಶನದ,

ಸುರೇಶ್ ಕೆ. ನಿರ್ಮಾಣದ “ಪಿದಾಯಿ” ಪಡೆದುಕೊಂಡಿದೆ. ಮನೋಹರ ಕೆ. ನಿರ್ದೇಶನದ, ಪೃಥ್ವಿ ಕೊಣನೂರು ನಿರ್ಮಿಸಿದ “ಮಿಕ್ಕ ಬಣ್ಣದ ಹಕ್ಕಿ” ಸಿನಿಮಾ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು.

ಅದರಲ್ಲೂ ಒಟ್ಟು ಮೂರು ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರಗಳೊಂದಿಗೆ ಪೈಪೋಟಿ ನಡೆಸಿ ಪ್ರಶಸ್ತಿ ಎರಡು ತುಳು ಚಿತ್ರಗಳು ಪಡೆದಿರುವುದು ಇದೇ ಮೊದಲಾಗಿದ್ದು, ಕರಾವಳಿಗರು ಚಿತ್ರ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *