ಬೆಳ್ತಂಗಡಿ:(ಮಾ.10) ಇಂದಬೆಟ್ಟು ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಗೋಪಾಲ ಇವರು ಅನಾರೋಗ್ಯದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಇದನ್ನೂ ಓದಿ: ⭕ವಿಟ್ಲ: ನೇಣುಬಿಗಿದುಕೊಂಡು 22 ವರ್ಷದ ಯುವಕ ಆತ್ಮಹತ್ಯೆ
ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸುಶೀಲ ಹೆಗ್ಡೆ, ರತ್ನರಾಜ ಹೆಗ್ಡೆ, ಶ್ರೀ ರೊನಾಲ್ಡ್ ತಾವ್ರ್ಹೋ, ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಇವರುಗಳ ಸಹಕಾರದೊಂದಿಗೆ ಸುಮಾರು 35,000ಗಳ ಆರ್ಥಿಕ ನೆರವನ್ನು ಚೆಕ್ ಮೂಲಕ ನೌಕರರ ಕುಟುಂಬಕ್ಕೆ ನೀಡಿದರು.



ಅನಾರೋಗ್ಯದಲ್ಲಿರುವ ಗೋಪಾಲ .ಕೆ ಇಂದಬೆಟ್ಟು ಬಿಲ್ ಕಲೆಕ್ಟರ್ ಇವರಿಗೆ ಪಡಿತರವನ್ನು ವಿತರಿಸಿದರು ಹಾಗೂ ಪ್ರತಿ ತಿಂಗಳು ಪಡಿತರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ರುಕೇಶ್ ಕಲ್ಮಂಜ, ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ನಡ, ಉಪಸ್ಥಿತರಿದ್ದರು. ನೌಕರರ ಸಂಘದಿಂದ ಕೃತಜ್ಞತೆ ಸಲ್ಲಿಸಲಾಯಿತು.
