ಬೆಳ್ತಂಗಡಿ:(ಮಾ.10) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಿರಿಯ ಮೇಲ್ವಿಚಾರಕಿ ಹಾಗೂ ತಾ. ವಿಕಲಚೇತನರ ಮತ್ತು ಹಿರಿಯ ನಾಗರಿಕರ ನೋಡೆಲ್ ಅಧಿಕಾರಿಯಾಗಿದ್ದ ರತ್ನಾವತಿ.ಪಿ ಲೋಕೇಶ್ ಅವರು ವಯೋ ನಿವೃತ್ತರಾಗಿದ್ದಾರೆ.

1884 ರಲ್ಲಿ ಬಂದಾರು ಗ್ರಾಮದ ಗೋದಾಮು ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಸೇವೆ ಆರಂಭಿಸಿದ್ದ ಅವರು ಅಲ್ಲಿ 9 ವರ್ಷ, ನಡ ಅಂಗನವಾಡಿಯಲ್ಲಿ 10 ವರ್ಷ ಸೇವೆ ಸಲ್ಲಿಸಿ, 2004 ಮೇಲ್ವಿಚಾರಕರಾಗಿ ಪದೋನ್ನತಿ ಹೊಂದಿದ್ದರು.

ಬಳಿಕ 2020 ರಲ್ಲಿ ಹಿರಿಯ ಮೇಲ್ವಿಚಾರಕಿಯಾಗಿ ಮೇಲ್ದರ್ಜೆಗೇರಿದ್ದರು. ಈ ಮಧ್ಯೆ ಅವರು ಪ್ರಭಾರ ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿಯಾಗಿ, ಪ್ರಭಾರ ಸಿಡಿಪಿಒ ಆಗಿಯೂ ಸೇರಿದಂತೆ ಸುದೀರ್ಘ 40 ವರ್ಷ ಇಲಾಖಾ ಸೇವೆ ಸಲ್ಲಿಸಿದ್ದಾರೆ.


ಇವರು ಅಂಗನವಾಡಿ ಕಾರ್ಯಕರ್ತೆಯಾಗಿದ್ದ ವೇಳೆ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ, ವಿಧವಾ ವೇತನ ಮತ್ತು ವಿಕಲ ವೇತನರ ಅತೀ ಹೆಚ್ಚು ನೊಂದಾವಣೆ ಹಾಗೂ ಮಾಶಾಸನ ಒದಗಿಸಿಕೊಟ್ಟದ್ದಕ್ಕಾಗಿ ಆಗಿನ ಶಾಸಕ ವಸಂತ ಬಂಗೇರರಿಂದ ಪುರಸ್ಕಾರ, ಹಿರಿಯ ನಾಗರಿಕರ ಅತೀ ಹೆಚ್ಚು ನೋಂದಾವಣೆಗಾಗಿ ಸರಕಾರಿ ನಿವೃತ್ತ ಹಾಗೂ ಹಿರಿಯ ನಾಗರಿಕರ ಸಂಘದಿಂದ ಗುರುತಿಸಲ್ಪಟ್ಟಿದ್ದರು.

