Wed. Mar 12th, 2025

Belthangady:(ಏ.6) ಅಖಿಲ ಕರ್ನಾಟಕ ರಾಜ ಕೇಸರಿ ವತಿಯಿಂದ “ಕೊತ್ತಲಿಗೆ ಕ್ರಿಕೆಟ್ ಮ್ಯಾಚ್”

ಬೆಳ್ತಂಗಡಿ:(ಮಾ.11) ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಮತ್ತು ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ .ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ

ಇದನ್ನೂ ಓದಿ: 🐍ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ಮೂಡಪ್ಪ ಸೇವೆ ನಡೆಯುವಾಗಲೇ ಪ್ರತ್ಯಕ್ಷವಾದ ನಾಗರಹಾವು

ತುಳುನಾಡಿನ ಅಪ್ಪಟ ಸಾಂಪ್ರದಾಯಕ ಕ್ರೀಡೆ ಅಳಿವಿನ ಹಂಚಿಕೆ ಸಿಲುಕಿ ನಶಿಸಿ ಹೋಗುತ್ತಿರುವ ಜಾನಪದ ಹಳ್ಳಿ, ಸೊಗಡಿನ ಕ್ರೀಡೆಗಳನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಸಲುವಾಗಿ

ದ್ವಿತೀಯ ಬಾರಿಗೆ ಕೊತ್ತಲಿಗೆ ಕ್ರಿಕೆಟ್ ಮ್ಯಾಚ್ ಯುವ ಉದ್ಯಮಿ ಕಿರಣ್ ಚಂದ್ರ .ಡಿ ಪುಷ್ಪಗಿರಿ ಇವರ ಸಹಕಾರದೊಂದಿಗೆ ಇದೇ ಬರುವ ಏಪ್ರಿಲ್ 06. ಭಾನುವಾರದಂದು ಬೆಳ್ತಂಗಡಿಯ ಹೃದಯಭಾಗದ ಜೂನಿಯರ್ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸದಾ ಸಾಂಸ್ಕೃತಿಕ ಧಾರ್ಮಿಕ ಶೈಕ್ಷಣಿಕ ಕ್ರೀಡೆ ಆರೋಗ್ಯ, ಸ್ವಚ್ಛತಾ ಸ್ವಚ್ಚಾಲಯ ವಿನೂತನ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಇಡೀ ರಾಜ್ಯದಲ್ಲಿ ಮನೆ ಮಾತಾಗಿರುವ ರಾಜ ಕೇಸರಿ ಸಂಘಟನೆಯ 553 ನೇಯ ಸೇವಾ ಯೋಜನೆ ಅಂಗವಾಗಿ ನಡೆಯಲಿದೆ.

Leave a Reply

Your email address will not be published. Required fields are marked *