Wed. Mar 12th, 2025

Kerala: ಆಸ್ಪತ್ರೆಯ ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಕ್ಯಾಮರಾ ಪತ್ತೆ – ಕ್ಯಾಮರಾ ಇರಿಸಿದ್ದ ಟ್ರೈನಿ ನರ್ಸ್‌ ಅರೆಸ್ಟ್!!

ಕೇರಳ:(ಮಾ.12) ಕೇರಳದ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ನರ್ಸ್‌ಗಳು ಮತ್ತು ಸಿಬ್ಬಂದಿ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಕ್ಯಾಮರಾ ಇರಿಸಿದ್ದ ಆರೋಪದ ಮೇಲೆ ಟ್ರೈನಿ ನರ್ಸ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ⭕ಮೂಡುಬಿದಿರೆ : ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ನಿಧನ

ಬಂಧಿತ ಆರೋಪಿಯನ್ನು ದಕ್ಷಿಣ ಚರಲೇಲ್ ನಿವಾಸಿ ಅನ್ಸನ್ ಜೋಸೆಫ್ (24) ಎಂದು ಗುರುತಿಸಲಾಗಿದೆ. ಮಂಗಳವಾರ (ಮಾ.11) ಸಿಬ್ಬಂದಿಯೊಬ್ಬರು ರೂಮ್‌ನಲ್ಲಿ ಬಟ್ಟೆ ಬದಲಾಯಿಸುವ ವೇಳೆ ಸ್ವಿಚ್ ಆನ್ ಆಗಿದ್ದ ಮೊಬೈಲ್ ಫೋನ್ ಪತ್ತೆಯಾಗಿತ್ತು. ಬಳಿಕ ಆಸ್ಪತ್ರೆ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಿದೆ.


ಆಸ್ಪತ್ರೆ ಅಧಿಕಾರಿಗಳು ಗಾಂಧಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆತನನ್ನು ಬಂಧಿಸಲಾಗಿದೆ. ವೀಡಿಯೊಗಳನ್ನು ರೆಕಾರ್ಡ್ ಮಾಡಲು ಫೋನ್ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಬಿಎಸ್ಸಿ ಓದಿರುವ ಅನ್ಸನ್, ಒಂದು ತಿಂಗಳ ಹಿಂದೆ ತರಬೇತಿಗಾಗಿ ಆಸ್ಪತ್ರೆಗೆ ಸೇರಿದ್ದ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *