ಪುತ್ತೂರು:(ಮಾ.12) ನಗರದ ಬನ್ನೂರಿನ ಜೈನರಗುರಿ ಸಮೀಪ ಗೌತಮ್ ಎನ್ನುವವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಗೆ ಹಾನಿ ಉಂಟಾಗಿತ್ತು, ಅವರ ಮನೆಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ವಜ್ರತೇಜಸ್ ಹಿಂದೂ ಕವಚ್ ತಂಡ ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿ ವಜ್ರ ತೇಜಸ್ ಹಿಂದೂ ಕವಚ್ ವತಿಯಿಂದ ಧನ ಸಹಾಯ ಮಾಡಲಾಯಿತು.

ಇದನ್ನೂ ಓದಿ: ⭕Drug case: ರನ್ಯಾ ಬಳಿಕ ಸ್ಯಾಂಡಲ್ವುಡ್ನ ಇಬ್ಬರು ನಟಿಯರಿಗೆ ಸಿಸಿಬಿ ಶಾಕ್
ಈ ಸಂದರ್ಭದಲ್ಲಿ ವಜ್ರತೇಜಸ್ ಇದರ ಅಧ್ಯಕ್ಷರಾದ ಮುರಳೀಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಬಿ.ಎಸ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ,




ವಜ್ರತೇಜಸ್ ಕೋಶಾಧಿಕಾರಿ ಗಣೇಶ್ ಕಾಮತ್, ವಜ್ರತೇಜಸ್ ಇದರ ಸಕ್ರಿಯ ಸದಸ್ಯರಾದ ರಾಮ್ ಪ್ರಸಾದ್ ಮಯ್ಯ ,ವಿಶ್ವ ಹಿಂದೂ ಪರಿಷದ್ ನಗರ ಕಾರ್ಯದರ್ಶಿ ಜಿತೇಶ್ ಬಲ್ನಾಡ್,ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಕೇಶವ ಪ್ರಸಾದ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.
