ಉಡುಪಿ :(ಮಾ.12) ಉಡುಪಿ ತಾಲೂಕು ಅಂಬಲಪಾಡಿ ಗ್ರಾಮ ಪಂಚಾಯತ್ ಸಿಬ್ಬಂದಿ ಇತ್ತೀಚಿಗೆ ಅನಾರೋಗ್ಯದಿಂದ ಮೃತಪಟ್ಟ ದಿ. ಸನಿಲ್ ಕುಮಾರ್ ಕುಟುಂಬಕ್ಕೆ ಆರ್ಥಿಕ ನೆರವು 60000/- ದ ಚೆಕ್ ಹಸ್ತಾಂತರ ಮಾಡಲಾಯಿತು.

ಇದನ್ನೂ ಓದಿ: ⭕ಕಾಪು: ಸ್ಕೂಟರ್ ಗೆ ಅಪರಿಚಿತ ವಾಹನ ಡಿಕ್ಕಿ
ಮಾ.02 ರಂದು ಉಡುಪಿ ತಾಲೂಕು ಅಂಬಲಪಾಡಿ ಗ್ರಾಮ ಪಂಚಾಯತಿಯ ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ದಿ. ಸನಿಲ್ ಕುಮಾರ್ ರವರ ಮನೆಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್ ಡಿ ಪಿ ಆರ್) ಜಿಲ್ಲಾ ಸಮಿತಿ ಭೇಟಿ ನೀಡಿ ಅವರ ಕುಟುಂಬಕ್ಕೆ ಸಹಾಯಧನವಾಗಿ ರೂ. 60,000/- ಮೊತ್ತದ ಚೆಕ್ ಅನ್ನು ಉಡುಪಿಯ ಜಿಲ್ಲಾಧ್ಯಕ್ಷರಾದ ಶ್ರೀ ಪ್ರಶಾಂತ್ ಕೆ ತೆಂಕನೆಡಿಯೂರವರು ಸನಿಲ್ ರವರ ಕುಟುಂಬಕ್ಕೆ ವಿತರಣೆ ಮಾಡಿದರು.



ಇವರು ಉಡುಪಿ ತಾಲೂಕು ಘಟಕದ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್ ಡಿ ಪಿ ಆರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್, ಉಡುಪಿ ಜಿಲ್ಲಾ ಕೋಶಾಧಿಕಾರಿ ಸಚಿನ್ ಮಣಿಪುರ, ಜಿಲ್ಲಾ ಪದಾಧಿಕಾರಿ ಅರವಿಂದ್ ಕುಕ್ಕೆಹಳ್ಳಿ, ಸಂಘಟನಾ ಕಾರ್ಯದರ್ಶಿ ಶಶಿ ಬೊಮ್ಮರಾಬೆಟ್ಟು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ನೌಕರರಿಗೆ ಸರಕಾರದ ಯಾವುದೇ ನೆರವು ಇಲ್ಲದೆ ಬಡ ಕುಟುಂಬದ ದಿವಂಗತ ಸನಿಲ್ ಕುಮಾರ್ ರವರ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಸಹಾಯಧನ ನೀಡಿದ ಎಲ್ಲರಿಗೂ ಸಂಘದ ಪರವಾಗಿ ರಾಜ್ಯಾಧ್ಯಕ್ಷರಾದ ಡಾ. ದೇವಿಪ್ರಸಾದ್ ಬೊಳ್ಮಾ ರವರು ಕೃತಜ್ಞತೆ ಸಲ್ಲಿಸಿದರು.
