ಉಜಿರೆ:(ಮಾ.13) ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು ಮತ್ತು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆ ಉಜಿರೆ ಶತಮಾನೋತ್ಸವ ಸಮಿತಿ ಇದರ ಸಹಯೋಗದಲ್ಲಿ ಉಚಿತ ನೇತ್ರ ಮತ್ತು ದಂತ ತಪಾಸಣಾ ಶಿಬಿರವು ಮಾ.16 ರಂದು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆ ಉಜಿರೆಯಲ್ಲಿ ಪೂರ್ವಾಹ್ನ ಗಂಟೆ 10:00 ರಿಂದ 1:00 ರವರೆಗೆ ನಡೆಯಲಿದೆ.



ಇದನ್ನೂ ಓದಿ: 🟠ಉಜಿರೆ:(ಮಾ.17-ಎ.15) ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಮೊಬೈಲ್ ಫೋನ್ ರಿಪೇರಿ ಉಚಿತ ತರಬೇತಿ


ತಪಾಸಣೆಗೆ ಬರುವವರಿಗೆ ಸೂಚನೆಗಳು:
- ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡುವ ರೋಗಿಗಳು ಶಿಬಿರದ ತಪಾಸಣಾ ದಿನದಂದೇ ವೈದ್ಯರ ಜೊತೆ , ಮಂಗಳೂರಿಗೆ ಹೋಗಲು ಸಿದ್ಧರಿರಬೇಕು(1/2) ಬೆಲೆಯಲ್ಲಿ ಕನ್ನಡಕ ಕೊಡಲಾಗುವುದು.
- ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಪ್ರಯಾಣ, ಊಟ ಮತ್ತು ವಸತಿ ಸೌಲಭ್ಯ ನೀಡಲಾಗುವುದು.
- ಶಿಬಿರಕ್ಕೆ ಬರುವಾಗ ಫೋಟೋ ಇರುವ ಯಾವುದಾದರೂ ಒಂದು ಗುರುತಿನ ಚೀಟಿ(ಆಧಾರ್) ಮತ್ತು ಲಭ್ಯವಿರುವ ಆರೋಗ್ಯ ವಿಮಾ ದಾಖಲೆಯನ್ನು ತರುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9632711610 / 7338578510

