ಉಜಿರೆ: (ಮಾ.12) “ಭಾಷೆಯನ್ನು ಕಲಿಯುವ ಜೊತೆಗೆ ಭಾಷೆಯ ಬಗ್ಗೆ ಕಲಿಯುವುದು ಶ್ರೇಷ್ಠವಾದುದು. ಅದನ್ನು ಕನ್ನಡ ಸಂಘದ ಮೂಲಕ ನಡೆಸುತ್ತಿರುವುದು ಸಂತಸದ ವಿಷಯ” ಎಂದು ನಿವೃತ್ತ ಮುಖ್ಯ ಶಿಕ್ಷಕ ಶ್ರೀ ರಾಮಕೃಷ್ಣ ಭಟ್ ಹೇಳಿದರು.

ಇದನ್ನೂ ಓದಿ: ⭕ಮುಲ್ಕಿ: ನೇಣುಬಿಗಿದುಕೊಂಡು 21 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ!!
ಇವರು ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿದ್ಯಾರ್ಥಿ ಕನ್ನಡ ಸಂಘವು ವಿನೂತನವಾಗಿ ಬಿಡುಗಡೆಗೊಳಿಸಿದ ‘ಉದ್ಘೋಷ’ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.


ವಿದ್ಯಾರ್ಥಿನಿ ಶ್ರೇಯ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಇಂಪನಾ ವಂದಿಸಿ, ಧೃತಿ ನಿರೂಪಿಸಿದರು.
