Tue. Apr 29th, 2025

Kutyaru: ಸ್ಕೌಟ್ ಮತ್ತು ಬುಲ್ ಬುಲ್ ಅರ್ಹತಾ ಪತ್ರ ವಿತರಣೆ

ಕುತ್ಯಾರು: (ಮಾ.14) ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು ಇಲ್ಲಿನ ಸ್ಕೌಟ್ ಮತ್ತು ಬುಲ್ ಬುಲ್ ಘಟಕದ ದ್ವಿತೀಯ ಸೋಪಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಸೂರ್ಯಕುಮಾರ್ ಹಳೆಯಂಗಡಿ ಇವರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು. ಅರುಣ್ .ಪಿ ಆಚಾರ್ಯ ಮುಂಬೈ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.

ಇದನ್ನೂ ಓದಿ: ⭕Karkala: ಬ್ಯಾಂಕಿಗೆ ಹೋಗಿ ಬರುವುದಾಗಿ ಹೇಳಿ ಹೋದ 18 ವರ್ಷದ ಯುವತಿ ನಾಪತ್ತೆ

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಗುರುರಾಜ ಕೆ.ಜೆ. ಮಂಗಳೂರು, ಜನಾರ್ದನ ಬಜಕೂಡ್ಲು, ಸುಧೀಶ್, ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ, ಮುಖ್ಯ ಶಿಕ್ಷಕಿ ಸಂಗೀತ ರಾವ್ ಉಪಸ್ಥಿತರಿದ್ದು, ಅರ್ಹತಾ ಪತ್ರಗಳನ್ನು ವಿತರಿಸಿದರು.

ಸ್ಕೌಟ್ ಶಿಕ್ಷಕಿಯಾದ ರಮ್ಯಾ, ಬುಲ್ ಬುಲ್ ಶಿಕ್ಷಕಿ ಅಮಿತಾ, ಬನ್ನಿಸ್ ಶಿಕ್ಷಕಿಯರಾದ ರಶ್ಮಿ ಮತ್ತು ವಿಶಾಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *