ಮಂಗಳೂರು : (ಮಾ.14) ಬಜಪೆಯ ಮೂಡುಪೆರಾರ ನಿವಾಸಿ, ನೀರುಮಾರ್ಗ ಪ್ಯಾರಾಮೆಡಿಕಲ್ ವಿದ್ಯಾರ್ಥಿ ನಿತೇಶ್ ಬೆಳ್ಚಾಡ ಅವರು ಕಳೆದ ಹಲವು ದಿನಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ.

ಇದನ್ನೂ ಓದಿ: ⭕ಕಲಬುರಗಿ: ಮನೆಗಾಗಿ ಮನವಿ ಮಾಡಿದ ಮಹಿಳೆ
ಇದೀಗ ನಿತೇಶ್ ಕಾಣೆಯಾದ ಪ್ರಕರಣ ಕೂಡಾ ಈಗ ಅಂತ್ಯ ಕಂಡಿದೆ. ಈತ ಗೋವಾದಲ್ಲಿ ಪತ್ತೆಯಾಗಿದ್ದಾನೆ.

ಫೆಬ್ರವರಿ 13 ಕ್ಕೆ ನಾಪತ್ತೆಯಾಗಿದ್ದ ಈತನ ಸುಳಿವಿಗೆ ಪೊಲೀಸರು ವಿಶೇಷ ತಂಡ ರಚಿಸಿ ಅನೇಕ ಕಡೆ ತನಿಖೆ ನಡೆಸಿದ್ದು ಸುಳಿವು ಸಿಕ್ಕಿರಲಿಲ್ಲ. ಇದೀಗ ಆತ ಗೋವಾದಲ್ಲಿ ಸಿಕ್ಕಿದ್ದಾನೆ ಎಂದು ತಿಳಿದು ಬಂದಿದೆ.


