ಮಂಗಳೂರು (ಮಾ.14): ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಕ್ರೈಂ ಮಾಡುತ್ತಿದ್ದ ಕೇರಳ ಮೂಲದ ನಟೋರಿಯಸ್ ಕ್ರಿಮಿನಲ್ಗಳು ಅಂದರ್ ಆಗಿದ್ದಾರೆ.
ಇದನ್ನೂ ಓದಿ: ⭕ಮಂಗಳೂರು: ನೆರೆಮನೆಯಾತನ ಮೇಲೆ ದ್ವೇಷ
ವಾಮಂಜೂರಿಲ್ಲಿ ಮುಸ್ಲಿಂ ಧರ್ಮಗುರುವಿನ ಮೇಲಾದ ಮಿಸ್ ಫೈಯರ್ ಪ್ರಕರಣದ ತನಿಖೆ ಮಾಡುವ ವೇಳೆ ಅವರೆಲ್ಲಾ ಅಂದರ್ ಆಗಿದ್ದಾರೆ. ಇನ್ನು ಅವರ ಬಳಿ ಜೀವಂತ ಮದ್ದುಗುಂಡುಗಳಿರುವ ಪಿಸ್ತೂಲ್ಗಳು ಸಿಕ್ಕಿದೆ.


ಕಳೆದ ಜನವರಿಯಲ್ಲಿ ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ಮುಸ್ಲಿಂ ಧರ್ಮಗುರು ಸಫ್ವಾನ್ ಎಂಬುವವರ ಮೇಲೆ ಮಿಸ್ ಫೈಯರ್ ಆಗಿತ್ತು.


ಅಕ್ರಮ ಪಿಸ್ತೂಲ್ನಿಂದ ಅದ್ದು ಅಲಿಯಾಸ್ ಬದ್ರುದ್ಧೀನ್ ಗುಂಡು ಹೊಡೆದ ಆರೋಪದ ಮೇಲೆ ಬಂಧಿತನಾಗಿದ್ದ. ಇನ್ನು ಈ ಬಗ್ಗೆ ತನಿಖೆಗೆ ಇಳಿದ ಪೊಲೀಸರು ಸತತ ಎರಡು ತಿಂಗಳ ಕಾರ್ಯಾಚರಣೆ ಬಳಿಕ ಕೇರಳ ಮೂಲದ ನಟೋರಿಯಸ್ ಅಂತರಾಜ್ಯ ಕ್ರಿಮಿನಲ್ಗಳನ್ನು ಬಂಧಿಸಿದ್ದಾರೆ.
