Sat. Mar 15th, 2025

Belthangady: ಬೆಳ್ತಂಗಡಿಯ ತೆರಿಗೆ ಸಲಹೆಗಾರ ಸಂದೇಶ್‌ ರಾವ್‌ ರವರ ಕಛೇರಿ ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ:(ಮಾ.15) ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ಇರುವ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ತೆರಿಗೆ ಸಲಹೆಗಾರ ಸಂದೇಶ್ ರಾವ್ ರವರ ಕಛೇರಿಯು ಸ್ಥಳಾಂತರಗೊಂಡು

ಇದರ ಸ್ಥಳಾಂತರದ ನೂತನ ಕಛೇರಿಯು ಬೆಳ್ತಂಗಡಿಯ ಭಾರತ್ ಪೆಟ್ರೋಲ್ ಬಂಕ್ ಸಮೀಪವಿರುವ ಶ್ರೀ ಗುರು ಸಾನಿಧ್ಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಮಾ.14 ರಂದು ಲಕ್ಷ್ಮೀಪೂಜೆ ಸಹಿತ ಶುಭಾರಂಭಗೊಂಡಿತು.

ತೆರಿಗೆ ಸಲಹೆಗಾರ ಸಂದೇಶ್ ರಾವ್ ಹಾಗೂ ಶ್ರೀಮತಿ ಅರ್ಚನ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗುರುದೇವ ಸೊಸೈಟಿಯ ಉಪಾಧ್ಯಕ್ಷ ಭಗೀರಥ. ಜಿ, ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕರಾದ ಪುಷ್ಪರಾಜ್ ಶೆಟ್ಟಿ,
ಲಯನ್ಸ್ ಕ್ಲಬ್ ಬೆಳ್ತಂಗಡಿ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಲಯನ್ಸ್‌ ಅಶೋಕ್ ಕುಮಾ‌ರ್ ಬಿ.ಪಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು