Sat. Mar 15th, 2025

Mysore: ಕಟ್ಟಿಕೊಂಡವಳನ್ನು ಬಿಟ್ಟು ಇನ್ಸ್ಟಾಗ್ರಾಂ ಸುಂದ್ರಿ ಜೊತೆ ಕಿಸ್ಸಿಂಗು, ಡೇಟಿಂಗು – ಇಟ್ಟುಕೊಂಡವಳ ಹಿಂದೆ ಹೋದಾತ ಫಿನಿಶ್!!!

ಮೈಸೂರು, (ಮಾ.15): ಮದುವೆಯಾಗಿದ್ದರೂ ಹೆಂಡ್ತಿಯನ್ನು ಬಿಟ್ಟು ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಸುಂದರಿ ಹಿಂದೆ ಹೋಗಿ ದುರಂತ ಅಂತ್ಯಕಂಡಿದ್ದಾನೆ. ದೊರೆಸ್ವಾಮಿ ಅಲಿಯಾಸ್ ಸೂರ್ಯ ಮೃತ ವ್ಯಕ್ತಿ. ಈತ ಮೈಸೂರು ತಾಲ್ಲೂಕಿನ ಅನುಗನಹಳ್ಳಿಯ ನಿವಾಸಿಯಾಗಿದ್ದು, ಆರೇಳು ವರ್ಷಗಳ ಹಿಂದ ಮೈಸೂರಿನ ಹಿನಕಲ್‌ನ ನಿವಾಸಿ ದೀಪಿಕಾಳ ಮದುವೆಯಾಗಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಸಹ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಶ್ವೇತಾ ಎನ್ನುವ ಸುಂದರಿಯ ಬಲೆಗೆ ಬಿದ್ದು ಇದೀಗ ಕೊಲೆಯಾಗಿದ್ದಾನೆ.

ಇದನ್ನೂ ಓದಿ: ⭕ಶಿವಮೊಗ್ಗ : ವಿಧವೆ ಎಂದು ಬಾಳು ಕೊಟ್ಟ ಯುವಕ

ಮಾರ್ಚ್ 14 ರ ರಾತ್ರಿ ಕೂಡ ಅನುಗನಹಳ್ಳಿಯ ತೋಟದ ಮನೆಯಲ್ಲಿ ಶ್ವೇತಾ ಹಾಗೂ ಸೂರ್ಯ ಜೊತೆಯಲ್ಲೇ ಇದ್ದರು ಆದ್ರೆ, ಬೆಳಗಾಗುವಷ್ಟರಲ್ಲಿ ರೌಡಿ ಶೀಟರ್ ಸೂರ್ಯ ಕೊಲೆಯಾಗಿದ್ದಾನೆ. ಆದ್ರೆ, ಶ್ವೇತಾ ಮಾತ್ರ ಪರಾರಿಯಾಗಿದ್ದಾಳೆ. ಇನ್ನು ಕೊಲೆಯಾಗಿರೋ ಸ್ಥಳದಲ್ಲಿ ಹೋಟೆಲ್‌ನಿಂದ ತಂದ ಆಹಾರ ಪದಾರ್ಥಗಳು ಬಿದ್ದಿವೆ. ಇನ್ನು ಪ್ರೇಯಸಿ ಶ್ವೇತಾಳಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಈ ಕೃತ್ಯದ ಹಿಂದೆ ಶ್ವೇತಾಳ ಕೈವಾಡ ಇದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಸೂರ್ಯ ಹಾಗೂ ದೀಪಿಕಾ ಅನ್ಯೋನ್ಯ ಜೀವನ ಸಾಗಿಸುತ್ತಿದ್ದ ಟೈಮಲ್ಲಿ ಸೋಷಿಯಲ್​ ಮೀಡಿಯಾ ಮೂಲಕ ಪರಿಚಿತಳಾದ ಶ್ವೇತಾ ಎಂಬಾಕೆ‌ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದ್ದಾಳೆ. ಅವಳ ಜೊತೆ ಸಂಬಂಧದಲ್ಲಿದ್ದ ಸೂರ್ಯ, ಶ್ವೇತಾಳನ್ನು ಆಗಾಗ ಮನೆಗೂ ಕರೆದುಕೊಂಡು ಬರುತ್ತಿದ್ದನಂತೆ. ಇಬ್ಬರು ಜೊತೆ ಇರುವ ಖಾಸಗಿ ಪೋಟೋಗಳನ್ನು ಸ್ಟೇಟಸ್ ಗೆ ಹಾಕಿದ್ದ. ಈ ವಿಷಯ ಗೊತ್ತಾದ ಮೇಲೆ ಸೂರ್ಯ ಪತ್ನಿ ದೀಪಿಕಾ, ತಾಯಿ ಪುಷ್ಪ ಮನೆ ಬಿಟ್ಟು ತವರು ಮನೆ ಸೇರಿದ್ದಾರೆ‌.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು