ಮುಂಬೈ:(ಮಾ.15) ವಾಣಿಜ್ಯ ನಗರಿ ಮುಂಬೈ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ವೇಶ್ಯಾವಾಟಿಕೆಯನ್ನು ಮುಂಬೈ ಪೊಲೀಸರು ಭೇದಿಸಿದ್ದು ನಾಲ್ವರು ಉದಯೋನ್ಮುಖ ನಟಿಯರನ್ನು ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಿದ್ದಾರೆ. ಸಂತ್ರಸ್ತೆ ಯುವತಿಯರಲ್ಲಿ ಓರ್ವಳು ಹಿಂದಿ ಸೀರಿಯಲ್ ಗಳಲ್ಲಿಯೂ ನಟಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 💠ಕನ್ಯಾಡಿ: ಕನ್ಯಾಡಿ ಸರ್ಕಾರಿ.ಹಿ.ಪ್ರಾ.ಶಾಲೆಯ ಕುರಿತು ರಚಿಸಿರುವ
ಸಿನಿಮಾ ಧಾರಾವಾಹಿಗಳಲ್ಲಿ ನಟಿಸುವ ಉದ್ದೇಶದಿಂದ ಮುಂಬೈಗೆ ಬಂದಿದ್ದು, ಸರಿಯಾದ ಕೆಲಸ ಸಿಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ತಾವು ದೇಹ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಈ ನಾಲ್ವರು ತರುಣಿಯರು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.
ಪೊಲೀಸರು ಇವರು ದಂಧೆ ನಡೆಸುತ್ತಿದ್ದ ಹೊಟೇಲ್ ಗೆ ದಾಳಿ ನಡೆಸುತ್ತಿದ್ದಂತೆ ಈ ನಟಿಯಲ್ಲಿ ಹೆದರಿಕೊಂಡಿದ್ದು, ಭಯದಿಂದ ನಡುಗುತ್ತಿದ್ದರು. ಮುಖವನ್ನು ಮುಚ್ಚಿ ಕೊಂಡಿದ್ದರು ಎಂದು ದಾಳಿಯಲ್ಲಿ ಭಾಗವಹಿಸಿದ ಪೊಲೀಸರು ತಿಳಿಸಿದ್ದಾರೆ. ಸದ್ಯ ಇವರ ಗುರುತನ್ನು ಪೊಲೀಸರು ಗೌಪ್ಯವಾಗಿ ಇಟ್ಟಿದ್ದಾರೆ.

ಮುಂಬೈಯ ಪೂವೈ ನಗರದ ಹೊಟೇಲ್ ವೊಂದರಲ್ಲಿ ಹೈ ಪ್ರೊಪೈಲ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಪೊಲೀಸರಿಗೆ ದೊರೆತಿತ್ತು. 60ವರ್ಷದ ಶ್ಯಾಮ್ ಸುಂದರ್ ಆರೋರಾ ಪಿಂಪ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ಯಾಮ್ ಸುಂದರ್ ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಹಾಗೂ ಅವರಿಗೆ ವ್ಯಾಟ್ಸಾಪ್ ನಲ್ಲಿ ಯುವತಿಯರ ಫೋಟೊ ಕಳುಹಿಸುತ್ತಿದ್ದ. ಗ್ರಾಹಕರೊಂದಿಗೆ ಡೀಲ್ ಕುದುರಿ, ಪ್ರತಿ ಯುವತಿಗೆ 50 ಸಾವಿರದಿಂದ ಒಂದು ಲಕ್ಷದವರೆಗೆ ಚಾರ್ಜ್ ಮಾಡುತ್ತಿದ್ದ.


ಇದರಲ್ಲಿ ಆರ್ಧದಷ್ಟು ಹಣವನ್ನು ಅವನು ತನ್ನ ಬಳಿ ಇರಿಸಿಕೊಂಡು ಉಳಿದ ಹಣವನ್ನು ಆ ನಟಿಯರಿಗೆ ನೀಡುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಈ ಪ್ರಕರಣದಲ್ಲಿ ಇನ್ನು ಓರ್ವ ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
