Sat. Mar 15th, 2025

Puttur: ಇತಿಹಾಸ ಪ್ರಸಿದ್ಧ ಪುತ್ತೂರು ಬಲ್ನಾಡು ದೈವಸ್ಥಾನ ಮತ್ತು ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಚಾಕ್ರಿ ಸೇವಾಧಾರಿ ಉಮೇಶ್ ಗೌಡ ಹೃದಯಾಘಾತದಿಂದ ನಿಧನ

ಪುತ್ತೂರು:(ಮಾ.15) ಇತಿಹಾಸ ಪ್ರಸಿದ್ಧ ಪುತ್ತೂರು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವಕ್ಕೆ ಮುಂಡ್ಯ ಹಾಕುವ ಸಂದರ್ಭ ಗದ್ದೆಯಲ್ಲಿ ಚೆಂಡು ಉರುಳಿಸುವ ಮತ್ತು

ಇದನ್ನೂ ಓದಿ: ⭕Anupama Gowda: ಆತ ಎಲ್ಲೆಂದರಲ್ಲಿ ಟಚ್‌ ಮಾಡಿದ್ದ, ಆ ವ್ಯಕ್ತಿಯನ್ನು ಎಂದಿಗೂ ನಾನು ಕ್ಷಮಿಸುವುದಿಲ್ಲ! – ಅನುಪಮಾ ಗೌಡ

ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಕಟ್ಟೆಯಿಂದ ಕಟ್ಟೆಗೆ ಶ್ರೀದೇವರ ವಸ್ತ್ರ ಕೊಂಡೊಯ್ಯುವ ಚಾಕ್ರಿ ಸೇವೆ ಮಾಡುತ್ತಿದ್ದ ಬಲ್ನಾಡು ನಿವಾಸಿ ಉಮೇಶ್ ಗೌಡ(47ವ) ರವರು ಮಾ. 14 ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಬಲ್ನಾಡು ಕುಕ್ಕಪ್ಪ ಗೌಡರ ಪುತ್ರರಾಗಿರುವ ಉಮೇಶ್‌ ಗೌಡ ಅವರು ದೇವಸ್ಥಾನದ ಗದ್ದೆಯ ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಮಧ್ಯಾಹ್ನ ಮನೆಯಲ್ಲಿರುವ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಲೇ ಅವರು ನಿಧನರಾದರು.

ಮೃತರು ಪತ್ನಿ ಹಾಗೂ ಓರ್ವ ಸಹೋದರ ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು