Sat. Mar 15th, 2025

Shivamogga: ವಿಧವೆ ಎಂದು ಬಾಳು ಕೊಟ್ಟ ಯುವಕ – ಮದ್ವೆಯಾದ 15 ದಿನಕ್ಕೆ ಪರಾರಿಯಾದ ಪತ್ನಿ!!

ಶಿವಮೊಗ್ಗ,(ಮಾ.15): ಮದುವೆ ಎನ್ನುವುದು ಏಳೇಳು ಜನುಮಗಳ ಅನುಬಂಧ ಅಂತಾರೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎನ್ನಲಾಗುತ್ತೆ. ಹೌದು.. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪ ಮೌನೇಶ್, ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ 32 ವರ್ಷದ ವಿಧವೆ ದೀಪಿಕಾಳನ್ನು ಮದ್ವೆಯಾಗಿ ಬಾಳು ಕೊಟ್ಟಿದ್ದ.

ಇದನ್ನೂ ಓದಿ: ⭕Swathi Murder Case: ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!!

ಆದ್ರೆ, ಇಲ್ಲಿ ವಿಧವೆ ಎಂದು ಬಾಳು ಕೊಟ್ಟು ಮದುವೆಯಾದ ಯುವಕನ ಜೀವನದಲ್ಲಿ ಕೇವಲ ಹದಿನೈದೇ ದಿನಕ್ಕೆ ಬರಸಿಡಿಲು ಬಡಿದಿದೆ. ಮದ್ವೆ ಬಳಿಕ ಬೈಕ್‌ನಲ್ಲಿ ಸುತ್ತಾಡುವುದೇನು, ಒಬ್ಬರನ್ನೊಬ್ಬರು ಅಪ್ಪಿಕೊಂಡು ಪೋಸ್ ಕೊಡುವುದೇನು, ರೀಲ್ಸ್ ವಿಡಿಯೋಗಳೇನು. ಅಬ್ಬಬ್ಬಾ ಈ ಜೋಡಿ ಮಾದರಿ ಜೋಡಿ ಎನ್ನುವಂತಿತ್ತು. ಆದ್ರೆ, ನೂರ್ಕಾಲ ಜತೆಯಾಗಿ ಇರುತ್ತೇನೆ ಎಂದು ಮಾತುಕೊಟ್ಟು ಸಪ್ತಪದಿ ತುಳಿದವಳು 15ದಿನಕ್ಕೆ ಗಂಡನ ಬಿಟ್ಟು ಪರಾರಿಯಾಗಿದ್ದಾಳೆ. ವಿಧವೆ ಅಂತಾ ಬಾಳು ಕೊಟ್ಟವನ ಬದುಕಲ್ಲಿ ಚೆಲ್ಲಾಟವಾಡಿದ್ದಾಳೆ.

ತಂದೆ ತಾಯಿ ಇಲ್ಲದ ಅನಾಥನಾಗಿರುವ ಮೌನೇಶ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪದಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನು ದೀಪಿಕಾಗೆ ಈಗಾಗಲೇ ಮದ್ವೆಯಾಗಿದ್ದು, ಒಂದು ಮಗುವಿನ ತಾಯಿಯಾಗಿದ್ದಾಳೆ. ಆದ್ರೆ, 10 ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡಿದ್ದಾಳೆ. ಆದರೂ ಸಹ ಮೌನೇಶ್, 32ವರ್ಷದ ವಿಧವೆ ದೀಪಿಕಾ ಎನ್ನುವಳಿಗೆ ಬಾಳುಕೊಟ್ಟಿದ್ದ.

ಫೆಬ್ರವರಿ 7ರಂದು ನಾವುಲೆಯ ಚೌಡೇಶ್ವರಿ ದೇವಾಲಯದಲ್ಲಿ ಸರವಾಗಿ ವಿವಾಹವಾಗಿದ್ದರು. ಇಬ್ಬರು ಧರ್ಮಸ್ಥಳ ಸೇರಿ ವಿವಿಧ ದೇವಾಲಯಗಳಿಗೆ ಹೋಗಿ ಬಂದಿದ್ದರು. ಆದ್ರೆ, ಮದುವೆಯಾದ 2 ದಿನಕ್ಕೆ ತವರು ಮನೆ ಸೇರಿದ್ದವಳು, 15ದಿನಕ್ಕೆ ಗಂಡನಿಗೆ ಕೈಕೊಟ್ಟ ಎಸ್ಕೇಪ್ ಆಗಿದ್ದಾಳೆ.

ದಂಪತಿ ಬಾಳಲ್ಲಿ ಹುಳಿ ಹಿಂಡಿದ್ನಾ ಪೊಲೀಸಪ್ಪ?
ಇನ್ನು ದೀಪಿಕಾ ಪರಾರಿ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದ್ದು, ಮೌನೇಶ್​ ಹಾಗೂ ದೀಪಿಕಾ ದಂಪತಿ ದಂಪತಿ ಬಾಳಲ್ಲಿ ಚಿಕ್ಕಮಗಳೂರು ತಾಲೂಕಿನ ಕಳಸ ಠಾಣೆ ಎಎಸ್ಐ ಪೂರ್ಣೇಶ್‌ ಹುಳಿ ಹಿಂಡಿರುವ ಆರೋಪ ಕೇಳಿಬಂದಿದೆ.

ಪೂರ್ಣೇಶ್‌ ಎನ್ನುವರು ಕೆಲ ವರ್ಷಗಳಿಂದ ದೀಪಿಕಾ ಪರಿಚಯ ಇದ್ದು. ದೀಪಿಕಾ ಹೆಸರಲ್ಲಿ 2 ಎಕರೆ ಜಮೀನು ಸಹ ಇತ್ತು. ಇದರ ಮೇಲೆ ಕಣ್ಣಿಟ್ಟಿರುವ ಪೂರ್ಣೇಶ್, ಈಕೆ ಜತೆ ಸಂಬಂಧ ಇಟ್ಟುಕೊಂಡು ನಮ್ಮಿಬ್ಬರ ನಡುವೆ ತಂದಿಟ್ಟಿದ್ದಾನೆ ಎಂದು ಮೌನೇಶ್ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *