ಉಡುಪಿ: (ಮಾ.15) ಕಾಪು ಪೇಟೆಯಲ್ಲಿ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಯೋಜನೆಯ 250 ಕೆ.ಜಿ. ಅಕ್ಕಿಯನ್ನು ಸೀಜ್ ಮಾಡಿದ ತಹಶೀಲ್ದಾರ್ ಡಾ.ಪ್ರತಿಭಾ ಆರ್ ಆರೋಪಿಗಳ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: 💠ಕನ್ಯಾಡಿ: ಕನ್ಯಾಡಿ ಸರ್ಕಾರಿ.ಹಿ.ಪ್ರಾ.ಶಾಲೆಯ ಕುರಿತು ರಚಿಸಿರುವ
ಲವ ಕರ್ಕೇರ ಎನ್ನುವವರ ಖಚಿತ ಮಾಹಿತಿಯ ಮೇಲೆ ತಕ್ಷಣ ಸ್ಥಳಕ್ಕೆ ಧಾವಿಸಿದ ಆಹಾರ ನಿರೀಕ್ಷಕ ಲೀಲಾನಂದ್ ರವರು ಪೋಲೀಸರಿಗೆ ಮಾಹಿತಿ ನೀಡುತ್ತಾರೆ. ಅದರಂತೆ ಪೋಲೀಸರ ಸಹಕಾರದೊಂದಿಗೆ ಪ್ಯಾಸೆಂಜರ್ ಆಟೋದಲ್ಲಿ ಸಾಗಿಸುತ್ತಿದ್ದ 6 ಚೀಲಗಳಲ್ಲಿ ಇದ್ದ 250 ಕೆ.ಜಿ. ಅಕ್ಕಿಯನ್ನು ಮುಟ್ಟುಗೋಲು ಹಾಕಿಕೊಂಡು ಕಾಪು ಪೋಲೀಸ್ ಸ್ಟೇಷನ್ ಗೆ ತಂದು ದೂರು ನೀಡಿ FIR ದಾಖಲಿಸಿರುತ್ತಾರೆ.
ಅಂದಾಜು ಬೆಲೆ 8500/-
ಮಾರಾಟ ಮಾಡಲು ತಗೊಂಡು ಹೋಗ್ತಿದ್ವಿ:
ಆರೋಪಿಗಳಾದ ಕಲಂದರ್ ಶಾಫಿ, ಉಬೈದುಲ್ಲ ರವರನ್ನು ವಿಚಾರಣೆಗೆ ಒಳಪಡಿಸಿದಾಗ “ಪಡಿತರದಾರರಿಂದ” 20 ರೂಪಾಯಿಯಂತೆ ಖರೀದಿಸಿದ್ದು ಹೆಚ್ಚಿನ ಬೆಲೆಗೆ ಮಾರಲು ತಗೊಂಡು ಹೋಗ್ತಿದ್ವಿ ಎಂದು ಬಾಯಿ ಬಿಟ್ಟಿದ್ದಾರೆ.


ಕಾಪು ನ್ಯಾಯಬೆಲೆ ಅಂಗಡಿಯ ಅಕ್ಕಿ ಮತ್ತು ಇಲ್ಲಿ ಸಿಕ್ಕಿದ ಅಕ್ಕಿಯನ್ನು ಹೋಲಿಕೆ ಮಾಡಿ ನೋಡಿದಾಗ ಎರಡರಲ್ಲೂ ಸಾಮ್ಯತೆ ಇರುವುದು ಖಚಿತವಾಗಿದೆ.
ಆಹಾರ ನಿರೀಕ್ಷಕರ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗುವುದು.

ತಹಶೀಲ್ದಾರ್ ಡಾ.ಪ್ರತಿಭಾ ಆರ್ ಹೇಳಿಕೆ:
ಬಡವರ ಅಕ್ಕಿಯನ್ನು ಮಾರಾಟ ಮಾಡೋದನ್ನು ಖಂಡಿತ ಸಹಿಸೋದಿಲ್ಲ. ಕಾಪು ತಾಲ್ಲೂಕಿನಲ್ಲಿ ಮತ್ತೆ ಈ ರೀತಿಯ ಪ್ರಕರಣ ಮರುಕಳಿಸದಂತೆ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುವುದು. ಎಲ್ಲಾ ಪಡಿತರ ವಿತರಣಾ ಸೊಸೈಟಿಗಳ ಮೇಲೆ ತೀವ್ರ ನಿಗಾ ಇಡಲಾಗುವುದು. ಸಾರ್ವಜನಿಕರು
ಪಡಿತರ ಅಕ್ಕಿಯನ್ನು ಸ್ವಂತ ಉಪಯೋಗಕ್ಕೆ ಮಾತ್ರ ಬಳಸಬೇಕು. ಅನ್ಯ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ. ಯಾರಿಗಾದರೂ ಈ ರೀತಿಯ ಪ್ರಕರಣಗಳು ಗಮನಕ್ಕೆ ಬಂದರೆ ತಹಶಿಲ್ದಾರ್ ಕಚೇರಿಗೆ ಮಾಹಿತಿ ನೀಡತಕ್ಕದ್ದು ಎಂದು ತಹಶೀಲ್ದಾರ್ ಪ್ರತಿಭಾ ಆರ್ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಲೀಲಾನಂದ್, ಪಿ.ಎಸ್.ಐ ತೇಜಸ್ವಿ, ಲವ ಕರ್ಕೇರ ಮುಂತಾದ ಸಾರ್ವಜನಿಕರು ಹಾಜರಿದ್ದರು.
