Mon. Mar 17th, 2025

Udupi: ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ

ಉಡುಪಿ:(ಮಾ.17) ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮೀಕ್ಷಾ ಯೋಜನಾ ಬೈಠಕ್ ಮುಂಡ್ಕಿನ ಜೆಡ್ಡು ಆರ್. ಕೆ .ಪಾಟ್ಕರ್ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ ಅಧ್ಯಕ್ಷತೆಯಲ್ಲಿ ಜರಗಿತು.

ಇದನ್ನೂ ಓದಿ: ⭕ಮಂಗಳೂರು: ಹಿಂದೂ ಯುವತಿ ಜೊತೆಗಿದ್ದ ಅನ್ಯಕೋಮಿನ ಯುವಕ

ವಿದ್ಯಾಭಾರತಿ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ ಎಮ್ .ಸರಸ್ವತಿ ವಂದನೆಯ ಮೂಲಕ ದೀಪ ಬೆಳಗಿಸಿ ಬೈಠಕ್ ಗೆ ಚಾಲನೆ ನೀಡಿದರು.


ಆರ್. ಕೆ . ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸತೀಶ್ ಪಾಟೀಲ್ , ಸಂಚಾಲಕರು ಮಹೇಶ ಠಾಕೂರ್ , ಆರ್ ಕೆ ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಮಂಜುನಾಥ ಪಾಟೀಲ್ , ಸಂಜಯ ಪ್ರಭು , ಉಪಾಧ್ಯಕ್ಷರಾದ ರಾಧಾಕೃಷ್ಣ ಸಾಮಂತ, ದಿನೇಶ್ ಪ್ರಭು, ಕಾರ್ಯದರ್ಶಿ ಅಶೋಕ ಸಾಮಂತ, ಸಹಕಾರ್ಯದರ್ಶಿ ವೆಂಕಟೇಶ್ ಪ್ರಭು ಉಪಸ್ಥಿತರಿದ್ದರು.

ಜಿಲ್ಲಾ ಸಮೀಕ್ಷಾ ಯೋಜನೆಯ ನಿರ್ವಹಣೆಯ ಜೊತೆಗೆ ಪ್ರಾಸ್ತಾವಿಕ ನುಡಿಗಳನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ ಮಾಡಿದರು. ಸಂಸ್ಥೆಯ ಮುಖ್ಯೋಪಾಧ್ಯಾರಾದ ಚಂದ್ರಶೇಖರಪ್ಪ ಸ್ವಾಗತಿಸಿ ಶ್ರೀಮತಿ ಮುಕ್ತಾ ಆರ್. ನಾಯ್ಕ ನಿರೂಪಿಸಿದರು.

ವಿದ್ಯಾ ಭಾರತಿ ಸಂಯೋಜಿತ ಶಿಕ್ಷಣ ಸಂಸ್ಥೆಗಳಾದ ಡ್ಯಯಲ್ ಸ್ಟಾರ್ ಶಾಲೆ ಅಮವಾಸೆಬೈಲು , ಸೇವಾಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ,ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು , ಶ್ರೀರಾಮ ವಿದ್ಯಾ ಕೇಂದ್ರ ಕೋಡಿ ,ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ , ಸರಸ್ವತಿ ವಿದ್ಯಾಲಯ ಸಿದ್ಧಾಪುರ , ಶ್ರೀ ಜನಾರ್ದನ ಶಾಲೆ ಎಳ್ಳಾರೆ , ನಚಿಕೇತ ವಿದ್ಯಾಲಯ ಬೈಲೂರು, ಯು.ಎಸ್. ನಾಯಕ್ ಪ್ರೌಢಶಾಲೆ ಪಟ್ಲ , ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು, ಶ್ರೀ ರಾಮಪ್ಪ ಹಿ.ಪ್ರಾ.ಶಾಲೆ. ಪುಲ್ಕೇರಿ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

13 ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು , ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಪದಾಧಿಕಾರಿಗಳು , ವಿಷಯ ಪ್ರಮುಖರು ಸೇರಿ 51 ಸಮಾಲೋಚನೆಯಲ್ಲಿ ಪಾಲ್ಗೊಂಡರು.


ಆರಂಭದಲ್ಲಿ ಸಂಯೋಜಿತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ವರದಿಯನ್ನು ಮುಖ್ಯ ಶಿಕ್ಷಕರು ವಾಚಿಸಿದರು.
2025-26 ಶೈಕ್ಷಣಿಕ ವರ್ಷದ ಕ್ರೀಡಾಕೂಟ, ಪ್ರಶಿಕ್ಷಣ ವರ್ಗ, ಶೈಕ್ಷಣಿಕ ಸಹಮಿಲನ, ವಿಜ್ಞಾನ -ಗಣಿತ ಮೇಳ, ಸಂಸ್ಕೃತಿ ಜ್ಞಾನ ಮಹೋತ್ಸವ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ತಯಾರಿಸಲಾಯಿತು. ಸಂಸ್ಕೃತ ಭಾರತಿ ಬೆಂಗಳೂರು ನಡೆಸುತ್ತಿರುವ ಪ್ರಾಥಮಿಕ ಶಾಲಾ ಹಂತದಲ್ಲಿ ಸಂಸ್ಕೃತ ಕಲಿಯಿರಿ ಯೋಜನೆಯ ಬಗ್ಗೆ ರಾಘವೇಂದ್ರ ಪಡುಬಿದ್ರೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *