Wed. Mar 19th, 2025

Bengaluru: ಸದನದಿಂದ ತೆಗೆದು ಬಿಸಾಡುತ್ತೇನೆ, ಗೆಟ್‍ಔಟ್ – ಬಿಜೆಪಿ ಸದಸ್ಯರಿಗೆ ಸ್ಪೀಕರ್ ಖಾದರ್ ಎಚ್ಚರಿಕೆ

ಬೆಂಗಳೂರು :(ಮಾ.18) ಸದನದ ಚರ್ಚೆ ವೇಳೆ ಘೋಷಣೆ ಕೂಗಿ, ಗದ್ದಲ ಎಬ್ಬಿಸಿದ ಬಿಜೆಪಿ ಸದಸ್ಯರ ನಡೆಗೆ ಕೆಂಡಾಮಂಡಲರಾದ ಯು.ಟಿ. ಖಾದರ್, ಸದನದಿಂದ ತೆಗೆದು ಬಿಸಾಡುತ್ತೇನೆ, ಗೆಟ್‍ಔಟ್ ಎಂದು ಗದರಿ ಬಿಜೆಪಿ ಸದಸ್ಯರಿಗೆ ಎಚ್ಚರಿಕೆ ಪ್ರಸಂಗ ಜರಗಿತು.

ಇದನ್ನೂ ಓದಿ: ⭕ಮಂಗಳೂರು: ಮರದ ಕೊಂಬೆ ಮುರಿದು ಬಿದ್ದು ಮೂವರು ವಿದ್ಯಾರ್ಥಿನಿಯರಿಗೆ ಗಾಯ

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಸಂದರ್ಭದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು ಎಂಬ ಬಿಸಿ ಬಿಸಿ ಚರ್ಚೆ ನಡೆಯಿತು.

ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ತಾಳ್ಮೆ ಕಳೆದುಕೊಂಡ ಸ್ಪೀಕರ್ ಖಾದರ್, ಬಿಜೆಪಿ ಸದಸ್ಯ ರತ್ತ ನೋಡಿ, ತಾಳ್ಮೆಯಿಂದ ಇಲ್ಲಿ ಇರಲು ಆಗದಿದ್ದರೆ ಸದನ ಬಿಟ್ಟು ಹೋಗಿ. ಇಲ್ಲವೆಂದರೆ, ನಾನೇ ತೆಗೆದು ಬಿಸಾಡಬೇಕಾಗುತ್ತದೆ. ಯಾರು ಎಂದು ನೋಡಲ್ಲ, ಹೊರಗಡೆ ಹೋಗಿ ಎಂದು ಎಚ್ಚರಿಸಿದರು.

ಬಿಸಾಡುತ್ತೇನೆ ಎಂಬ ಪದ ಬಳಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹಾಗೆ ಮಾತನಾಡುವುದು ಯಾವ ಅಧ್ಯಕ್ಷರೂ ಹೀಗೆ ಮಾತನಾಡಿಲ್ಲ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ವಿಪಕ್ಷ ಆರ್.ಅಶೋಕ್ ದನಿಗೂಡಿಸಿ, ಈ ಪದವನ್ನು ಕಡತದಿಂದ ತೆಗೆಯುವಂತೆ ಮನವಿ ಮಾಡಿದಾಗ ಸ್ಪೀಕರ್
ಸೂಚಿಸಿದರು. ಮೊದಲು ಅಂಬೇಡ್ಕರ್ ಬಗ್ಗೆ ಮಾತನಾಡಿದಾಗ ಬಿಸಾಡುತ್ತೇನೆ ಎಂದರೆ ಏನು ಅರ್ಥ? ನಾವು ಬಿಟ್ಟಿಗೆ ಬಂದಿದ್ದೇವಾ? ಎಂದು ಬಿಜೆಪಿಯವರು ಪ್ರಶ್ನಿಸಿದರು.

ಸರ್ಕಲ್‍ಗೆ ಅಂಬೇಡ್ಕರ್ ಹೆಸರಿಡುವ ಯೋಗ್ಯತೆ ಇಲ್ಲ..!

ಬಿಜೆಪಿ ಸದಸ್ಯರ ಅಸಮಾಧಾನದ ವೇಳೆ ತಿರುಗೇಟು ಕೊಟ್ಟ ಯು.ಟಿ.ಖಾದರ್, ಮಂಗಳೂರಿನ ಜ್ಯೋತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಕಟ್ಟಿ ಎಷ್ಟು ವರ್ಷವಾಯಿತು? ಒಂದು ಸರ್ಕಲ್ ಕಟ್ಟುವ ಯೋಗ್ಯತೆ ಇಲ್ಲ. ಇಲ್ಲಿ ಮಾತನಾಡುತ್ತೀರಾ ಎಂದು ಕರಾವಳಿ ಶಾಸಕರತ್ತ ನೋಡಿ ಗದರಿಸಿದರು.

Leave a Reply

Your email address will not be published. Required fields are marked *