ಕತಾರ್: (ಮಾ.18) ಫೆಬ್ರವರಿ 26 ರಂದು ಐ.ಸಿ.ಸಿ. ಕತಾರ್, ಮುಂಬೈ ಹಾಲ್ ನಲ್ಲಿ ನಡೆದ ಬಿಲ್ಲವಾಸ್ ಕತಾರ್ ನ ಕಾರ್ಯಕಾರಿ ಮತ್ತು ಸಲಹಾ ಮಂಡಳಿಯ ಸಭೆಯಲ್ಲಿ, ಪ್ರಸ್ತುತ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಅಪರ್ಣ ಶರತ್ ಅವರನ್ನು ಸರ್ವಾನುಮತದಿಂದ ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು ಎಂದು ಮಾಜಿ ಅಧ್ಯಕ್ಷರಾದ ಶ್ರೀ ರಘುನಾಥ್ ಅಂಚನ್ ಘೋಷಿಸಿ ಶುಭಹಾರೈಸಿದರು.

ಇದನ್ನೂ ಓದಿ: ⭕ಮಹಾರಾಷ್ಟ್ರ: ಮಹಿಳೆಯ ಮಾಂಗಲ್ಯ ಸರ ಕದ್ದು ಪತಿಯ ತಲೆಯನ್ನು ಕಲ್ಲಿನಿಂದ ಜಜ್ಜಿದ ದುಷ್ಕರ್ಮಿಗಳು
ಶ್ರೀಮತಿ ಅಪರ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್, ಮಂಗಳೂರು ನಿವಾಸಿಯಾಗಿದ್ದು, ಎಂ.ಬಿ.ಎ. (ಮಾನವ ಸಂಪನ್ಮೂಲ) ಪದವಿಯನ್ನು ಹೊಂದಿದ್ದಾರೆ. ಅವರು ಕತಾರ್ ನ ಸುಪ್ರಸಿದ್ದ ಕಂಪೆನಿಗಳಲ್ಲಿ ಒಂದಾದ ಗಲ್ಫಾರ್ ಅಲ್ ಮಿಸ್ನಾಡ್ ನಲ್ಲಿ ಮಾನವ ಸಂಪನ್ಮೂಲ ವಿಭಾಗೀಯ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿಲ್ಲವಾಸ್ ಕತಾರ್ ನ ಉಪಾಧ್ಯಕ್ಷರಾಗಿ ಶ್ರೀ ಜಯರಾಮ ಸುವರ್ಣ ಅವರನ್ನು ನೇಮಿಸಲಾಯಿತು.
ಬಿಲ್ಲವಾಸ್ ಕತಾರ್ – ಪ್ರಸ್ತುತ ಕಾರ್ಯಕಾರಿ ಸಮಿತಿ
ಪ್ರಸ್ತುತ ಕಾರ್ಯಕಾರಿ ಸಮಿತಿಯ ಸದಸ್ಯರು:
• ಶ್ರೀ ಮಹೇಶ್ ಕುಮಾರ್ – ಕಾರ್ಯದರ್ಶಿ
• ಶ್ರೀ ಸಂದೀಪ್ ಕೋಟ್ಯಾನ್ – ಜೊತೆ ಕಾರ್ಯದರ್ಶಿ
• ಶ್ರೀ ಅಜಯ್ ಕೋಟ್ಯಾನ್ – ಕೋಶಾಧಿಕಾರಿ
• ಶ್ರೀಮತಿ ಸೀಮಾ ಉಮೇಶ್ ಪೂಜಾರಿ – ಕ್ರೀಡಾ ಕಾರ್ಯದರ್ಶಿ
• ಶ್ರೀಮತಿ ಪೂಜಾ ಜಿತಿನ್ – ಸಾಂಸ್ಕೃತಿಕ ಕಾರ್ಯದರ್ಶಿ
• ಶ್ರೀಮತಿ ಶ್ವೇತಾ ಅನಿಲ್ – ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ
• ಶ್ರೀ ನಿತಿನ್ ಸನಿಲ್ – ಮಾಧ್ಯಮ ಸಂಯೋಜಕ
• ಶ್ರೀಮತಿ ಚಂಚಲಾಕ್ಷಿ – ಸದಸ್ಯ ಸಂಯೋಜಕಿ
• ಶ್ರೀ ನಿತಿನ್ ಕುಂಪಲ – ಲಾಜಿಸ್ಟಿಕ್ಸ್ ಸಂಯೋಜಕ

ಬಿಲ್ಲವಾಸ್ ಕತಾರ್ – ಒಂದು ಚರಿತ್ರೆಯ ಸಂಕ್ಷಿಪ್ತ ಪರಿಚಯ
● ಕತಾರ್ ಬಿಲ್ಲವ ಸಂಘಟನೆ ಹೇಗೆ ಆರಂಭವಾಯಿತು? ಪಯಣ ಹೇಗಿತ್ತು?
ಈ ಸಂಘಟನೆಯ ಬೀಜವನ್ನು ಶ್ರೀ ದಿವಾಕರ ಪೂಜಾರಿಯವರು ತಮ್ಮ ಗೆಳೆಯರೊಂದಿಗೆ ನೆಟ್ಟರು. 2012ರ ಮೇ 4ರಂದು, ಕೇವಲ 45 ಮಂದಿ ಸೇರಿ ಇಟ್ಟುಕೊಂಡ ಸಣ್ಣ ಸಭೆ, ಇಂದು ಒಂದು ದೊಡ್ಡ ಸಮುದಾಯವಾಗಿ ಬೆಳೆದಿದೆ.

ರಘುನಾಥ್ ಅಂಚನ್ ಅವರ ನೇತೃತ್ವದಲ್ಲಿ 2023ರವರೆಗೆ 250ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಐ.ಸಿ.ಸಿ (Indian Cultural Centre) ಯ ಅಂಗ ಸಂಸ್ಥೆಯಾಗಿ ಬೆಳೆಯಿತು. 2024ರಲ್ಲಿ ಸಂದೀಪ್ ಸಾಲಿಯಾನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ಸಂಘವು ಶೈಕ್ಷಣಿಕ ಮತ್ತು ವೈದ್ಯಕೀಯ ನೆರವು, ಹೊಸ ಪ್ರತಿಭೆಗಳ ಅನಾವರಣ, ಸಾಂಸ್ಕೃತಿಕ ಹಾಗೂ ಮನೋರಂಜನೆ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಶ್ರೇಯಸ್ಕರ ಸೇವೆ ಸಲ್ಲಿಸುತ್ತಿದೆ.
