ಬೆಳ್ತಂಗಡಿ:(ಮಾ.20) ಯುವಕನೋರ್ವ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬ್ಯಾಗ್ ಎಳೆದು ತೊಂದರೆ ಕೊಟ್ಟ ಘಟನೆ ವೇಣೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ⭕ಬಂಟ್ವಾಳ: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ
ಘಟನೆಯ ಕುರಿತು ವೇಣೂರು ಠಾಣೆಗೆ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.
ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿನಿಗೆ ಪರಿಚಯಸ್ಥ ವೇಣೂರು ಗ್ರಾಮದ ಶಿವಾಜಿನಗರ ಕಾಲೋನಿ ನಿವಾಸಿ ಆಸ್ಪಕ್ (27) ಎಂಬಾತನೇ ಕಿರುಕುಳ ನೀಡಿದ ಆರೋಪಿಯಾಗಿದ್ದಾನೆ. ಬುಧವಾರ ಮೂಡುಬಿದ್ರೆಯಿಂದ ವೇಣೂರಿಗೆ ಬಸ್ಸಿನಲ್ಲಿ ಬರುವಾಗ ಆಕೆ ಕುಳಿತಿದ್ದ ಸೀಟಿನ ಬಳಿ ನಿಂತುಕೊಂಡು ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಯಾಗ್ ಎಳೆದು ತೊಂದರೆ ನೀಡಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ.




ಈತ ವಿದ್ಯಾರ್ಥಿ ನಿಗೆ ಪರಿಚಯಸ್ಥನಾಗಿದ್ದು ಕಾಣಸಿಕ್ಕಿದಾಗ ಮಾತನಾಡುತ್ತಿದ್ದರು ಆದರೆ ಆತನ ವರ್ತನೆ ಸರಿಯಿರದ ಕಾರಣ ಆತನಲ್ಲಿ ಮಾತನಾಡುವುದನ್ನು ನಿಲ್ಲಿಸಿದ್ದರು. ಈ ಬಗ್ಗೆ ಮನೆಯವರಿಗೂ ಮಾಹಿತಿ ನೀಡಿದ್ದರು. ಆದರೂ ಆತ ಹಿಂಬಾಲಿಸಿ ಬಂದು ತೊಂದರೆ ನೀಡಿದ್ದ ಈ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
