ಬೆಳ್ತಂಗಡಿ:(ಮಾ.20) ಬೆಳ್ತಂಗಡಿ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವಾದ ನೇಲ್ಯಡ್ಕದಲ್ಲಿರುವ ಸರಕಾರಿ ಪ್ರೌಢಶಾಲೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ನವರು ಎರಡು ವಾಲಿಬಾಲ್ ಹಾಗೂ 2 ತ್ರೋಬಾಲ್ ಪೋಲ್ ಗಳನ್ನು ಕೊಡುಗೆಯಾಗಿ ನೀಡಿದರು.

ಬ್ಯಾಂಕಿನ ಬೆಳ್ತಂಗಡಿ ಶಾಖೆಯ ಮ್ಯಾನೇಜರ್ ಶರುಣ್ ಪಿಂಟೋ ಹಾಗೂ ಸಿಬ್ಬಂದಿ ರಾಜೇಶ್ ಇವರು ನೇಲ್ಯಡ್ಕಕ್ಕೆ ಆಗಮಿಸಿ ಈ ಕೊಡುಗೆಯನ್ನು ಸಂಸ್ಥೆಗೆ ಹಸ್ತಾಂತರಿಸಿದರು.


ಗ್ರಾಮೀಣ ಪ್ರದೇಶದಲ್ಲಿರುವ ಕನ್ನಡ ಮಾಧ್ಯಮ ಸರಕಾರಿ ಪ್ರೌಢಶಾಲೆಗೆ ಶಾಶ್ವತ ಕೊಡುಗೆಯನ್ನು ನೀಡಿದ ಎಂಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಮುಖ್ಯೋಪಾಧ್ಯಾಯ ರಾಜೇಂದ್ರ ಕೃಷ್ಣ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಎಸ್ ಡಿ ಎಂ ಸಿ ಯ ಯಶವಂತ ಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್ ನಿರೂಪಿಸಿ, ಅರವಿಂದ ಗೋಖಲೆ ಸ್ವಾಗತಿಸಿ ಉದಯಕುಮಾರ್ ವಂದಿಸಿದರು.

ಈ ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
