Fri. Apr 4th, 2025

Belthangady: ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ಆನ್ಸ್ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಸಂಭ್ರಮಾಚರಣೆ

ಬೆಳ್ತಂಗಡಿ :(ಮಾ.20) ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ಆನ್ಸ್ ಕ್ಲಬ್ ವತಿಯಿಂದ ರೋಟರಿ ಸೇವಾ ಭವನ ಕಾಶಿ ಬೆಟ್ಟು, ರೊ.ಕೆ ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ: ⭕ಪುತ್ತೂರು: ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುತ್ತಿದ್ದ ಯುವಕನನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಈ ಸಂದರ್ಭದಲ್ಲಿ ಬೆಳ್ತಂಗಡಿ ಪರಿಸರದ 3 ಜನ ಮಹಿಳಾ ಸಾಧಕರನ್ನು ಅಭಿನಂದಿಸಲಾಯಿತು.

ಕಳೆದ 20 ವರ್ಷಗಳಿಂದ ಸ್ವ ಇಚ್ಚೆಯಿಂದ ಹೆಬ್ಬಾವು, ನಾಗರ ಹಾವು ಸೇರಿದಂತೆ ಹಲವು ಬಗೆಯ 130 ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನಿವಾಸಿ ಎಂ ಪ್ರಶಾಂತ್ ಅವರ ಪತ್ನಿ ಶೋಭಾ ರವರ ಸಾಹಸವನ್ನು ಪ್ರಶಂಸಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ, ಕಡಿರುದ್ಯಾವರ ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷೆ ಮತ್ತು ಬೆಳ್ತಂಗಡಿ ಮಹಿಳಾ ಮಂಡಲಗಳ ಗೌರವ ಅಧ್ಯಕ್ಷೆಯಾಗಿರುವ ಲೋಕೇಶ್ವರಿ ವಿನಯಚಂದ್ರರವರನ್ನು ಗೌರವಿಸಲಾಯಿತು.

ಇದರ ಜೊತೆಯಲ್ಲಿ ಪ್ರಗತಿಪರ ಕೃಷಿಯಲ್ಲಿ ಸಾಧನೆಗೈದು ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಮಹಿಳಾ ಕೃಷಿಕೆ ಪ್ರಶಸ್ತಿ ಸ್ವೀಕರಿಸಿರುವ ಜಯಶ್ರೀ ಪ್ರಕಾಶ್ ಇವರನ್ನು ಸಹ ಇದೇ ವೇದಿಕೆಯಲ್ಲಿ ಅಭಿನಂದಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿ, ಸವಾಲುಗಳು ಹೆಣ್ಣಿನ ಬದುಕಿನಲ್ಲಿ ಸಹಜ ಇವೆಲ್ಲವುಗಳನ್ನು ಮೆಟ್ಟಿ ನಿಂತಾಗ ಆಕೆ ಸಾಧಕಿಯಾಗುತ್ತಾಳೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.ಇದಕ್ಕೆ ಸಮಾಜದ ಪ್ರತಿಯೊಬ್ಬ ಗಂಡಿನ ಸಹಕಾರ ಮತ್ತು ಪ್ರೋತ್ಸಾಹ ಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ರೋ. ವಿದ್ಯಾ ಕುಮಾರ್ ಕಾಂಚೋಡು ಮಾತನಾಡಿ, ಮಹಿಳೆ ಇಂದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತಳಾಗಿದ್ದಾಳೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್ ಮತ್ತು ಕಾರ್ಯದರ್ಶಿ ಡಾ.ವಿನಯ ಕಿಶೋರ್ ಉಪಸ್ಥಿತರಿದ್ದರು. ರೋಟರಿ ಕ್ಲಬ್ ನ ಸದಸ್ಯರಾದ ಅನಂತ್ ಭಟ್, ಪ್ರವೀಣ್ ಗೋರೆ, ಶ್ರಿಕಾಂತ್, ಪ್ರಕಾಶ್ ಪ್ರಭಕ ಮತ್ತು ಆನ್ ಡಾ.ಭಾರತಿ, ಗೀತಾ ಪ್ರಭು ಸೇರಿದಂತೆ ಇತರೆ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ರೋ. ಮನೋರಮಾ ಭಟ್ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *