ಹೊನ್ನಾವರ :(ಮಾ.20) ಐದನೇ ತರಗತಿಯ ವಿದ್ಯಾರ್ಥಿಯೋರ್ವ ಸರಿಯಾಗಿ ಗಣಿತ ಲೆಕ್ಕ ಮಾಡಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕಿ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿ ಮೈ ಮೇಲೆ ಬಾಸುಂಡೆ ಬರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳ್ಳಿಕಾರ್ ಕರ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಬಗ್ಗೆ ಗುರುವಾರ ಬೆಳಗ್ಗೆ 9:30 ಗೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: 🟠ಉಜಿರೆ : ಉಜಿರೆಯ ಯುವ ಉದ್ಯಮಿ ಪ್ರವೀಣ್ ಹಳ್ಳಿಮನೆ ಅವರಿಂದ ಕಲ್ಮಂಜ ಶಾಲೆಗೆ ಕಂಪ್ಯೂಟರ್ ಹಸ್ತಾಂತರ
ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೋರ್ವ ಗಣಿತವನ್ನು ಸರಿಯಾಗಿ ಮಾಡಿಲ್ಲವೆಂದು ಸಿಟ್ಟಾದ ಶಿಕ್ಷಕಿ ವಿದ್ಯಾರ್ಥಿಗೆ ತಿದ್ದಿ ಪಾಠ ಮಾಡುವ ಬದಲು ಕೋಲಿನಿಂದ ಮನಸೋ ಇಚ್ಚೇ ಮೈ ಮೇಲೆ ಹೊಡೆದು ಬಾಸುಂಡೆ ಬರುಬಂತೆ ಮಾಡಿದ್ದಾರೆ. ಇದರಿಂದಾಗಿ ಆ ವಿದ್ಯಾರ್ಥಿಯ ಬೆನ್ನು ಬಾಸುಂಡೆಯಿಂದ ತುಂಬಿಕೊಂಡಿದ್ದು, ನೋವು ತಡೆದುಕೊಳ್ಳಲು ಸಾಧ್ಯವಾಗದಂತಾಗಿದೆ ಎನ್ನಲಾಗಿದೆ. ಇಷ್ಟೆಲ್ಲಾ ಮಾಡಿದ ಶಿಕ್ಷಕಿ ಮನೆಯವರಿಗೆ ಈ ವಿಚಾರ ಹೇಳಬೇಡ ಯಾವುದೋ ಸಿಟ್ಟಿನಲ್ಲಿ ಈ ರೀತಿ ಆಗಿದೆ ಎಂದು ವಿದ್ಯಾರ್ಥಿಗೆ ಸಮಾಧಾನ ಮಾಡಿದ್ದಾರಂತೆ.




ಶಾಲೆಯಿಂದ ಮನೆಗೆ ಹೋದ ವಿದ್ಯಾರ್ಥಿ ನೋವು ತಡೆದುಕೊಳ್ಳಲಾಗದೆ. ಪಾಲಕರಿಗೆ ವಿಚಾರ ತಿಳಿಸಿದ್ದಾನೆ. ಬಳಿಕ ಪಾಲಕರು ಶಿಕ್ಷಕಿಯನ್ನು ಕೇಳಿದ್ದರೆ ಆತನಿಗೆ ಅಲರ್ಜಿಯಿಂದಾಗಿ ಮೈ ಕೆಂಪಾಗಿರಬೇಕು ಎಂದು ತಪ್ಪಿಸಿಕೊಳ್ಳುವ ಹೇಳಿಕೆ ನೀಡಿದ್ದಾರೆ. ಇಂದಿನಿಂದ ಪರೀಕ್ಷೆ ಆರಂಭವಾಗಿದ್ದು, ವಿದ್ದಾರ್ಥಿ ಪರೀಕ್ಷೆ ಬರೆಯಲು ಹೋಗದಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆಂದು ಕಾದು ನೋಡಬೇಕಿದೆ.
