ಪುತ್ತೂರು:(ಮಾ.20) ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುತ್ತಿದ್ದ ಯುವಕನನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು ನಗರದ ಕಲ್ಲಿಮಾರು ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ⭕Hit and run: ಪೊಲೀಸರಿಂದಲೇ ಹಿಟ್ ಆ್ಯಂಡ್ ರನ್
ಮಾ.18 ರಂದು ಸಂಜೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಹಾಗೂ ಇತರೆ ಹೆಣ್ಣು ಮಕ್ಕಳಿಗೆ ಗದಗ ಮೂಲದ ಲಿಂಗಪ್ಪ ಎಂಬಾತ ತೊಂದರೆ ಕೊಡುತ್ತಿದ್ದ.



ಇದನ್ನು ಗಮನಿಸಿದ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಯುವಕ ಪುತ್ತೂರು ನಗರ ಪೊಲೀಸರ ವಶದಲ್ಲಿದ್ದಾನೆ ಎಂದು ತಿಳದು ಬಂದಿದೆ.

