Thu. Apr 3rd, 2025

Sullia: ಪ್ರೀತಿಯಲ್ಲಿ ಬಿದ್ದ ಯುವಕ ಮತ್ತು ಯುವತಿ – ಪ್ರೀತಿಸಿ ರಿಜಿಸ್ಟರ್ಡ್ ಮದುವೆಯಾದ ಜೋಡಿ – ಆಮೇಲೆ ಆಗಿದ್ದೇನು?

ಸುಳ್ಯ(ಮಾ.20): ಪ್ರೀತಿಯಲ್ಲಿ ಬಿದ್ದ ಯುವಕ ಮತ್ತು ಯುವತಿ ತಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ರಿಜಿಸ್ಟರ್ಡ್ ಮದುವೆಯಾದ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಇದನ್ನೂ ಓದಿ: ⭕ಪುತ್ತೂರು: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಆದರೆ, ಈ ವಿವಾಹಕ್ಕೆ ಯುವತಿಯ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಣ್ಣೂರು ಗ್ರಾಮದ ಯುವಕ ಮತ್ತು ಯುವತಿ ಮಂಗಳವಾರ ರಿಜಿಸ್ಟರ್ಡ್ ಮದುವೆ ಮೂಲಕ ಒಂದಾಗಿದ್ದಾರೆ. ಈ ಜೋಡಿ ಮದುವೆಗಾಗಿ ಸುಳ್ಯದ ವಕೀಲರ ಕಚೇರಿಗೆ ಆಗಮಿಸಿದಾಗ ಯುವತಿಯ ಮನೆಯವರಿಗೆ ಈ ವಿಷಯ ತಿಳಿದಿದೆ. ತಕ್ಷಣವೇ ಧಾವಿಸಿದ ಅವರು ಯುವಕ ಮತ್ತು ಯುವತಿಯನ್ನು ಪ್ರಶ್ನಿಸಲು ಯತ್ನಿಸಿದ್ದಾರೆ. ಆದರೆ, ಉಂಟಾದ ಗೊಂದಲದಿಂದ ಭಯಗೊಂಡ ಈ ಜೋಡಿ ಸುಳ್ಯ ಪೊಲೀಸ್ ಠಾಣೆಯ ಆಶ್ರಯ ಪಡೆದಿದ್ದಾರೆ.

ಪೊಲೀಸರು ಯುವಕ ಮತ್ತು ಯುವತಿಯನ್ನು ವಿಚಾರಿಸಿದ ಬಳಿಕ ಹೆಚ್ಚಿನ ಕಾನೂನು ಕ್ರಮಕ್ಕಾಗಿ ಅವರನ್ನು ಪೊಲೀಸ್ ಸಿಬ್ಬಂದಿಯೊಂದಿಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದ್ದು. ಮುಂದಿನ ಕಾನೂನು ಪ್ರಕ್ರಿಯೆಯನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *