ಉಜಿರೆ :(ಮಾ.20) ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಉಜಿರೆಯ ಪ್ರವೀಣ್ ಹಳ್ಳಿಮನೆ ಅವರು ಇದೀಗ ಕಲ್ಮಂಜ ಶಾಲೆಗೆ ಕಂಪ್ಯೂಟರ್ ನೀಡುವ ಮೂಲಕ ಮಾದರಿಯಾಗಿದ್ದಾರೆ. ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜಕ್ಕೆ ಕಂಪ್ಯೂಟರ್ ನ ಅಗತ್ಯತೆ ಇತ್ತು. ಹೀಗಾಗಿ ಕಂಪ್ಯೂಟರ್ ಅನ್ನು ಪ್ರವೀಣ್ ಹಳ್ಳಿ ಮನೆಯವರು ಕೊಡುಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ⭕ಹಳಿಯಾಳ : ಅಂಗನವಾಡಿ ಮಕ್ಕಳ ಆಹಾರ ಕಳ್ಳತನ
ಈ ಹಿನ್ನೆಲೆ ಕಂಪ್ಯೂಟರ್ ಕೊಠಡಿಯನ್ನು ಶೇಖರ್ ಟಿ, ಪ್ರಬಂಧಕರು ಮಂಜುಶ್ರೀ ಪ್ರಿಂಟರ್ಸ್ ಉದ್ಘಾಟನೆಗೊಳಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಕಂಪ್ಯೂಟರ್ ಅನ್ನು ಶಾಲೆಗೆ ಗಣ್ಯರು ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಪ್ರವೀಣ್ ಹಳ್ಳಿಮನೆ, ಕಳೆದ 3 ತಿಂಗಳಿನಿಂದ ಕಂಪ್ಯೂಟರ್ ಸಂಬಂಧ ಅನೇಕ ಸಮಸ್ಯೆಗಳು ನಮಗೆ ಕಾಡಿದವು. ಯಾವುದೇ ಪತ್ರವನ್ನು ಪ್ರಿಂಟ್ ತೆಗೆಯಬೇಕಾದರೆ ಉಜಿರೆಗೆ ಹೋಗಬೇಕು ಈ ಹಿನ್ನೆಲೆ ನಾವು ಕಂಪ್ಯೂಟರ್ ನ ಅಗತ್ಯತೆ ಕಂಡು ಕಂಪ್ಯೂಟರ್ ನೀಡಿದ್ದೇನೆ ಎಂದರು. ನಾನು ಕೂಡ ಇದೇ ಶಾಲೆಯಲ್ಲಿ ಕಲಿತಿದ್ದು. ನನಗೂ ಈ ಶಾಲೆಯ ಋಣ ಇದೆ ಎಂದರು. ಈ ಬಾರಿ ನನಗೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿ ಶಾಲೆಯ ಅಭಿವೃದ್ಧಿ ಮಾಡಬೇಕು ಎಲ್ಲರ ಸಹಕಾರ ಬೇಕು ಎಂದರು.

ಕಲ್ಮಂಜ ಶಾಲೆಯ ಸಭಾಂಗಣಕ್ಕೆ ಸರ್ಕಾರದಿಂದ ಸಹಾಯ.!
ಕಲ್ಮಂಜ ಶಾಲೆಗೆ ಸಭಾಂಗಣಕ್ಕೆ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಂಜೂರು ಮಾಡುವಂತೆ ಆಯಾ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದರು.

ಸಂತೋಷ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ..!
ನಮಗೆ ಕಂಪ್ಯೂಟರ್ ನ ಅಗತ್ಯತೆ ತುಂಬಾನೆ ಇದೆ. ಭೌಗೋಳಿಕ ಸನ್ನಿವೇಶವನ್ನು ಶಿಕ್ಷಕರಿಗೆ ಇನ್ನು ಮುಂದೆ ನಮಗೆ ತಿಳಿಸಲು ಸುಲಭ ಮತ್ತು ನಮಗೆ ಸರಿಯಾದ ರೀತಿಯಲ್ಲಿ ಅರ್ಥಪಡಿಸಬಹುದು. ಈ ಹಿಂದೆ ಶಿಕ್ಷಕರು ಮೊಬೈಲ್ ಬಳಸಿ ಇವೆಲ್ಲ ತಿಳಿಸಿಕೊಡುತ್ತಿದ್ದರು, ಆದರೆ ಈಗ ಕಂಪ್ಯೂಟರ್ ಸಿಕ್ಕಿದೆ ಅದು ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಶಿಧರ ಎಂ ಕಲ್ಮಂಜ , ಕರುಣಾಕರ ಆಚಾರ್ಯ, ಮಿರ್ಷಾದ್ ನಿಡಿಗಲ್ , ಶಾಲಾ ಶಿಕ್ಷಕರು ಮತ್ತಿತರು ಉಪಸ್ಥಿತರಿದ್ದರು. ಸುಬ್ರಾಯ ಸ್ವಾಗತಿಸಿದರು, ಹಮೀದ್ ವಂದಿಸಿದರು.
