Fri. Apr 11th, 2025

Ujire: ಮಾ.23ರಂದು ಉಚಿತ ಶ್ರವಣ ತಪಾಸಣೆ, ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮ

ಉಜಿರೆ,ಮಾ .20( ಯು ಪ್ಲಸ್ ಟಿವಿ): ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆ ಉಜಿರೆ ಶತಮಾನೋತ್ಸವ ಸಮಿತಿ ಇದರ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಇವರ ಸಹಯೋಗದೊಂದಿಗೆ

ಇದನ್ನೂ ಓದಿ: ⭕ಹೊನ್ನಾವರ : ಹಳ್ಳಿಕಾರ್ ಕರ್ಕಿ ಹಿರಿಯ ‌ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಿಂದ ವಿದ್ಯಾರ್ಥಿಗೆ ಥಳಿತ

ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮವು ಮಾರ್ಚ್ 23 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಜಿರೆ ಇಲ್ಲಿ ನಡೆಯಲಿದೆ.

ಕಾರ್ಯಕ್ರಮವು ಬೆಳಗ್ಗೆ ಗಂಟೆ 9.30ಕ್ಕೆ ಆರಂಭವಾಗಲಿದ್ದು ಸಂಜೆ ಗಂಟೆ 4 ವರೆಗೆ ಇರಲಿದೆ. ಶಿಬಿರಕ್ಕೆ ಕಾಮಧೇನು ಹೋಟೆಲ್ ಉಜಿರೆ ಇದರ ಶ್ರೀ ಮಾಧವ ಹೊಳ್ಳ ಸಹಕಾರ ನೀಡಲಿದ್ದಾರೆ. ಈ ಶಿಬಿರದ ವಿಚಾರದಲ್ಲಿ ಸಮಿತಿಯು ಹಲವು ಸೂಚನೆಗಳನ್ನು ಈಗಾಗಲೇ ಕೊಟ್ಟಿದ್ದು ನೋಂದಣಿಯನ್ನು ಕಡ್ಡಾಯವಾಗಿ ಮಾಡಬೇಕಾಗಿದೆ.

ಹಿರಿಯರಿಗೆ ಮೊದಲ ಆಧ್ಯತೆ ನೀಡಲಾಗಿದೆ, ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ ಇದ್ದರೆ ಅದನ್ನು ಜೊತೆಯಲ್ಲಿ ತರಬೇಕು. ಮೊದಲು ನೋಂದಾಯಿಸುವ 40 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಶ್ವರ್ ಮಲ್ಪೆ ಟೀಂ ನವರು ದೇಣಿಗೆ ಮೊತ್ತದಿಂದ 40% ಶ್ರವಣ ಸಾಧನದ ಮೊತ್ತವನ್ನು ಪಾವತಿಸುತ್ತಾರೆ. ಇದಕ್ಕಾಗಿ 20-03-2025ರ ಒಳಗಾಗಿ ನೊಂದಣಿ ಮಾಡುವುದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 9632711610/ 7338578510 ಸಂಪರ್ಕಿಸುವಂತೆ ಮಾಧ್ಯಮದ ಮೂಲಕ ಸಮಿತಿಯು ಮನವಿ ಮಾಡಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು