Fri. Apr 4th, 2025

Vitla: ಬಟ್ಟೆ ಅಂಗಡಿಗೆ ನುಗ್ಗಿ ಬೆದರಿಕೆ ಒಡ್ಡಿ ಬಟ್ಟೆಗಳೊಂದಿಗೆ ಪರಾರಿಯಾದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!!

ವಿಟ್ಲ:(ಮಾ.20) ಹಾಡ ಹಗಲೇ ಬಟ್ಟೆ ಅಂಗಡಿಗೆ ನುಗ್ಗಿದ ತಂಡವೊಂದು ಅಲ್ಲಿದ್ದ ಮಹಿಳಾ ಸಿಬ್ಬಂದಿಗೆ‌ ಬೆದರಿಕೆ ಒಡ್ಡಿ ಬಟ್ಟೆ ಸಹಿತ ಇತರ ವಸ್ತುಗಳನ್ನು ದೋಚಿದ ಘಟನೆ ವಿಟ್ಲ ಪೇಟೆಯಲ್ಲಿ ಮಾ.18ರಂದು ನಡೆದಿದೆ.

ಇದನ್ನೂ ಓದಿ: 🟠ಉಜಿರೆ: ಮಾ.23ರಂದು ಉಚಿತ ಶ್ರವಣ ತಪಾಸಣೆ

ಶಾಲಾ ರಸ್ತೆಯಲ್ಲಿರುವ ಬಟ್ಟೆಅಂಗಡಿಯೊಂದಕ್ಕೆ ಮಾ. 18 ರ ಮಧ್ಯಾಹ್ನ ವೇಳೆ ಕಾರಿನಲ್ಲಿ ಬಂದ ನವೀನ್ ಕುಂಪಲ ಮತ್ತು ಇತರ ಮೂರು ಜನರಿದ್ದ ತಂಡವೊಂದು ಏಕಾಏಕಿ ಅಕ್ರಮ ಪ್ರವೇಶ ಮಾಡಿ ಅಂಗಡಿಯಲ್ಲಿರುವ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತನ್ನ ಬ್ಯಾಗಿನೊಳಗೆ ತುಂಬಿಸಿ ಕೊಂಡೋಯ್ಯಲು ಪ್ರಯತ್ನಿಸಿತ್ತು. ಈ ವೇಳೆ ಮಹಿಳಾ ಸಿಬ್ಬಂದಿಯು ಪ್ರಶ್ನಿಸಿದ ವೇಳೆ ಆಕೆಗೂ ಬೆದರಿಕೆ ಒಡ್ಡಿದ ತಂಡ ಬಟ್ಟೆಗಳನ್ನು ಕೊಂಡೊಯ್ದಿದೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಲಾಗಿದೆ.
ಘಟನೆಯು ಹತ್ತಿರದ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಸಲಿ ಸತ್ಯ ಬಯಲು?
ಬಟ್ಟೆ ಅಂಗಡಿಯೊಂದಕ್ಕೆ ತಿಂಗಳಿಗೊಮ್ಮೆ ಹಣ ಪಾವತಿಸುವ ಷರತ್ತಿನ ಮೇರೆಗೆ ವಿತರಕನೊಬ್ಬ ಬಟ್ಟೆಗಳನ್ನು ಸರಬರಾಜು ಮಾಡಿದ್ದು. ಆದರೇ ಷರತ್ತಿನಂತೆ ಮಾಲೀಕ ಹಣ ಪಾವತಿಸದೇ ಸತಾಯಿಸಿದಾಗ ಆ ವಿತರಕ ತಾನೂ ಸಪ್ಪೆ ಮಾಡಿದ ಬಟ್ಟೆಯನ್ನು ಬಲತ್ಕಾರದಿಂದ ತೆಗೆದುಕೊಂಡು ಹೋದ ಘಟನೆ ವಿಟ್ಲದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣವು ದರೋಡೆಯೆಂದು ಬಿಂಬಿತವಾಗಿ ಒಂದಷ್ಟು ಗಂಟೆಗಳ ಕಾಲ ಆತಂಕ ಭೀತಿಗೂ ಕಾರಣವಾಯಿತು.

ವಿಟ್ಲ ಪೊಲೀಸ್ ಠಾಣೆಯ ಸಮೀಪದಲ್ಲಿ ಇತ್ತೀಚೆಗೆ ಹೊಸದಾಗಿ ಆರಂಭವಾದ ಬಟ್ಟೆ ಅಂಗಡಿಯಲ್ಲಿ ಘಟನೆ ನಡೆದಿದೆ.

ಬಟ್ಟೆ ಅಂಗಡಿಗಳಿಗೆ ಬಟ್ಟೆಗಳನ್ನು ಸರಬರಾಜು ಮಾಡುವ ವಿತರಕರಿದ್ದು, ಅವರು ಈ ಅಂಗಡಿಗಳಿಗೆ ಹಣ ಪಾವತಿಸಲು ಒಂದಷ್ಟು ಸಮಯ ನೀಡುತ್ತಾರೆ. ಬಹುತೇಕ ಕಡೆ ಇಂತಹ ವ್ಯವಹಾರಗಳು ಕೇವಲ ವಿಶ್ವಾಸದ ಮೇಲೆ ನಡೆಯುತ್ತಿದ್ದು, ದಾಖಲೆಗಳನ್ನು ಇಟ್ಟುಕೊಳ್ಳುವುದಿಲ್ಲ. ಇದೇ ಪದ್ಧತಿಯನ್ನು ಈ ಅಂಗಡಿಯಲ್ಲೂ ಅನುಸರಿಸಲಾಗುತಿತ್ತು ಎಂದು ತಿಳಿದು ಬಂದಿದೆ.

ಇದರಿಂದ ಕಂಗೆಟ್ಟ ವಿತರಕ, ತನ್ನ ಕಾರಿನಲ್ಲಿ ಅಂಗಡಿಗೆ ಬಂದು. ತಾನು ವಿತರಿಸಿದ ಬಟ್ಟೆಗಳನ್ನು ಹಿಂತೆಗೆದುಕೊಂಡು ಹೋಗಿದ್ದಾನೆ.
ಈ ಘಟನೆಯ ಸಿಸಿಟಿವಿ ದೃಶ್ಯಗಳ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು “ಅಂಗಡಿ ದರೋಡೆ” ಕಥೆ ಕಟ್ಟಲಾಗಿದೆಎಂದು ತಿಳಿದು ಬಂದಿದೆ. ಆದರೆ ನಿಜವಾಗಿ ಘಟನೆಯ ಹಿಂದೆ. ಸುಮಾರು 5,500 ರೂಪಾಯಿ ಮೌಲ್ಯದ ಬಟ್ಟೆಗಳಿಗೆ ಹಣ ಪಾವತಿಸದಿರುವುದೇ ಕಾರಣ ಎಂದು ತಿಳಿದುಬಂದಿದೆ.
ಈ ಬಗ್ಗೆ ವಿತರಕ ಮತ್ತು ಅಂಗಡಿ ಮಾಲೀಕ ಇಬ್ಬರೂ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು. ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆದ ಬಳಿಕ ಅಂಗಡಿ ಮಾಲಿಕರು ಹಣ ಹಿಂದಿರುಗಿಸಿದ್ದು, ಬಳಿಕ ಪ್ರಕರಣ ಸುಖಾಂತ್ಯಗೊಂಡಿದೆ.

Leave a Reply

Your email address will not be published. Required fields are marked *