ಚಿಕ್ಕಮಗಳೂರು:(ಮಾ.21)ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ ಎಂದು ಕುಡುಕನೊಬ್ಬ ಆ್ಯಂಬುಲೆನ್ಸ್ಗೆ ಕಾಲ್ ಮಾಡಿ ಅವರ ಸಮಯವನ್ನು ಹಾಳು ಮಾಡಿರೋ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.

ಇದನ್ನೂ ಓದಿ: 🛑Bengaluru: ಬುರ್ಖಾ ಧರಿಸಿ ಸ್ನೇಹಿತೆಯ ಹಾಸ್ಟೆಲ್‌ಗೆ ನುಗ್ಗಿದ ಯುವಕ
ಹೌದು, ಕುಡಿದ ಮತ್ತಿನಲ್ಲಿ ಕುಡುಕನೊಬ್ಬ ಶೃಂಗೇರಿಯಲ್ಲಿ ಗಲಾಟೆಯಾಗಿ ತುಂಬಾ ಪೆಟ್ಟಾಗಿದೆ, ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ ಎಂದು ಆಂಬ್ಯುಲೆನ್ಸ್ಗೆ ಕರೆ ಮಾಡಿ ತಲೆ ತಿಂದಿದ್ದಾನೆ.



ಇನ್ನೂ ಫೋನ್ ಬರುತ್ತಿದ್ದಂತೆ ಬಾಳೆಹೊನ್ನೂರಿನಿಂದ 40 ಕಿ.ಮೀ.ದೂರದ ಶೃಂಗೇರಿಗೆ 108 ಆಂಬ್ಯುಲೆನ್ಸ್ ಬಂದಿದೆ. ಆಗ ಆಂಬ್ಯುಲೆನ್ಸ್ ಬರ್ತಿದ್ದಂತೆ ನಂಗೆ ಬೇಡ ಎಂದ ಕೂಗಾಡಿದ್ದಾನೆ. ಮತ್ತೆ ನಿಮಗೆ ತಾಕತ್ತಿದ್ರೆ ನನ್ನ ಹಿಡೀರಿ ನೋಡೋಣ ಎಂದು ಪೊಲೀಸರಿಗೆ ಕುಡುಕ ಚಾಲೆಂಜ್ ಮಾಡಿದ್ದಾನೆ.

ಕೆಲ ಹೊತ್ತು ಕುಡುಕನನ್ನ ಹಿಡಿಯಲು ಪೊಲೀಸರ ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣಗೊಂಡಿತ್ತು. ಇದಾದ ಬಳಿಕ ಶೃಂಗೇರಿ ಪಟ್ಟಣದ ವೈನ್ ಶಾಪ್ನಲ್ಲಿ ಅಡಗಿ ಕುಳಿತುಕೊಂಡಿದ್ದ ಆತನನ್ನು ಸ್ಥಳೀಯರು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಆಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಬಳಿಕ ಸರ್ ತಪ್ಪಾಯ್ತು ಬಿಡಿ ಸರ್ ಎಂದು ಕೈಮುಗಿದಿದ್ದಾನೆ.
