ಬಂಟ್ವಾಳ(ಮಾ.22) ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಕೋತಿರಾಜ್ ಮುಂದಾಗಿದ್ದು, ಮಾ.23 ರಂದು ಆದಿತ್ಯವಾರ ಬೆಳಿಗ್ಗೆ ಬೆಟ್ಟದ ಮೇಲೆ ಏರುವ ಬಗ್ಗೆ ಇಂದು ಅಧಿಕೃತವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ⭕ಯಾದಗಿರಿ: ಬಣ್ಣ ಬಣ್ಣದ ಮಾತನಾಡಿ ವಿಧವೆ ಜೊತೆ ಲವ್, ದೈಹಿಕ ಸಂಬಂಧ
ಕರುನಾಡಿನ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದ ಕೋತಿರಾಜ್ ಅವರು ಪ್ರಥಮ ಬಾರಿಗೆ ದ.ಕ.ಜಿಲ್ಲೆಯ ಬಂಟ್ವಾಳದತ್ತ ಆಗಮಿಸಿ ತನ್ನ ಸಾಹಸದ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ ಒಂದನ್ನು ನಡೆಸುವ ಕೋತಿರಾಜ್ ಅವರು, ಆ ಮೂಲಕ ಇನ್ನಷ್ಟು ಸಮಾಜ ಸೇವೆ ಮಾಡಲು ಆರ್ಥಿಕ ಸಹಾಯಧನದ ಅವಶ್ಯಕತೆ ಇದೆ.




ಈ ಹಿನ್ನೆಲೆಯಲ್ಲಿ ಬಂಟ್ವಾಳದ ಪುರಾಣ ಪ್ರಸಿದ್ಧ ದೇವಾಲಯದ ಬೆಟ್ಟವನ್ನೇರಲು ಸಿದ್ದತೆ ನಡೆಸಿದ್ದಾರೆ.
ದೇವಸ್ಥಾನ ಹಾಗೂ ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ಈ ಬಗ್ಗೆ ಅಧಿಕೃತವಾಗಿ ಪತ್ರವನ್ನು ನೀಡಿದ ಅವರು ಬೆಳ್ತಂಗಡಿ ಬಂಟ್ವಾಳ ತಾಲೂಕಿನ ಜನರ ಸಹಕಾರ ಯಾಚಿಸಿದ್ದಾರೆ.
