ಬೆಂಗಳೂರು (ಮಾ.22): ಹನಿಟ್ರ್ಯಾಪ್ ಪಿತಾಮಹ ನರೇಂದ್ರ ಮೋದಿ ಆಗಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಸಂಜಯ್ ಜೋಶಿ ಅವರ ಹನಿಟ್ರ್ಯಾಪ್ ಮಾಡಿದ್ದು ನರೇಂದ್ರ ಮೋದಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ⭕ದಾಂಡೇಲಿ : ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ!
ಕರ್ನಾಟಕ ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಭಾರತದ ಹನಿಟ್ರ್ಯಾಪ್ ಪಿತಾಮಹ ಆಗಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬಗ್ಗೆ ಪುಸ್ತಕ ಇದೆ. ಅಲ್ಲಿ ಏನೆಲ್ಲಾ ನಡೆದಿದೆ ಗೊತ್ತಾ? ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕಿಶೋರ್ ಕುಮಾರ್ ಅವು ಯಾರಪ್ಪನ ಮನೆಯಲ್ಲೂ ನಡೆದಿಲ್ಲ ಎಂದರು.


ಇದಕ್ಕೆ ಸಿಡಿಮಿಡಿಗೊಂಡ ಹರಿಪ್ರಸಾದ್ ಕುಳಿತುಕೊಳ್ಳುವಂತೆ ಸೂಚಿಸಿದರು. ಜೊತೆಗೆ, RSS ಬಗ್ಗೆ ಮಾತನಾಡದಂತೆ ಹರಿಪ್ರಸಾದ್ ಅವರಿಗೆ ಸಭಾಪತಿ ಎಚ್ಚರಿಸಿದರು.

